Home ತಾಜಾ ಸುದ್ದಿ ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪ: ಪುರಸಭೆ ಮುಖ್ಯಾಧಿಕಾರಿ ಅಮಾನತು

ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪ: ಪುರಸಭೆ ಮುಖ್ಯಾಧಿಕಾರಿ ಅಮಾನತು

0

ಲಿಂಗಸುಗೂರು: ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಆರೋಪದಡಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರು ಮೂಲ ಹುದ್ದೆ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದಾರೆ. ಈ ಹಿಂದೆ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಕಾರಿಯಾಗಿದ್ದರು.
ಹಾಲಿ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿಗಳಾಗಿದ್ದ ರೆಡ್ಡಿ ರಾಯನಗೌಡ ಅವರು ಮಸ್ಕಿ ಪುರಸಭೆ ಕಾರ್ಯಾಲಯಕ್ಕೆ ಪೀಠೋಪಕರಣಗಳ ಅಳವಡಿಕೆಗೆ 57.64 ಲಕ್ಷ ಮೊತ್ತದ ಕಾಮಗಾರಿ ನಿರ್ವಹಣೆಯಲ್ಲಿ ಸರ್ಕಾರದ ನಿಯಮಗಳ ಪಾಲನೆ ಮಾಡದೇ ಕರ್ತವ್ಯಲೋಪ ಹಾಗೂ ಪೀಠೋಪಕರಣಗಳ ಪುರಸಭೆಗೆ ಹಸ್ತಾಂತರ ಹಣ ಪಾವತಿಸಿರುವುದು ಹಾಗೂ ಅಧಿಕಾರಿ ದುರುಪಯೋಗ. ಸರ್ಕಾರದ ಹಣ ದುರ್ಬಳಕೆ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ವಿವರಿಸಲಾಗಿದೆ.

Exit mobile version