ದಾವಣಗೆರೆ: ಜಲಸಿರಿ 24X7 ನೀರು ಸರಬರಾಜು ಮಾದರಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಮತ್ತು ರಾಜ್ಯದಲ್ಲಿ ಪ್ರಸ್ತುತಪಡಿಸಲು ದಾವಣಗೆರೆ ಜಿಲ್ಲೆ ಆಯ್ಕೆಯಾಗಿದೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಶುಕ್ರವಾರ ನಡೆದ ಸುಜಲಂ ಶೃಂಗಸಭೆಯಲ್ಲಿ ದಾವಣಗೆರೆ 24X7 ನೀರು ಸರಬರಾಜು ಮಾದರಿಯನ್ನು ಹಿರೇಮಳಲಿ ಗ್ರಾಮ ಪಂಚಾಯತ್ ಪಿಡಿಒ ಎನ್. ರಶ್ಮಿ ಮತ್ತು ಹಿರೇಮಳಲಿಯ ವಿಜಿನಾಯಕ್ ವಿಡಬ್ಲ್ಯೂಎಸ್‌ಸಿ ಅಧ್ಯಕ್ಷ ವಿಜಿನಾಯಕ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿದ್ದು, ರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತುತಪಡಿಸಲು ಜಿಲ್ಲೆಗೆ ಮಾತ್ರ ಅವಕಾಶ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಪಂಚಾಯತ ಸಿಇಓ ಗಿತ್ತೆ ಮಾಧವ ವಿಠಲರಾವ್ ಸಂತಸ ಹಂಚಿಕೊಂಡಿದ್ದಾರೆ.
