ಯಾವುದೇ ಕಾರಣಕ್ಕೂ ಮಂಡ್ಯ ಬಿಟ್ಟು ಕೊಡಲ್ಲ

0
10

ಬೆಂಗಳೂರು: ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಮಂಡ್ಯದಿಂದಲೇ. ಇಲ್ಲದಿದ್ದರೆ ನನಗೆ ರಾಜಕೀಯವೇ ಬೇಡ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಜೆಡಿಎಸ್‌ಗೆ ಮಂಡ್ಯ ಟಿಕೆಟ್ ಹೋದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಆದಾಗ ನನ್ನ ನಿಲುವು ಹೇಳುವೆ. ಹೈಕಮಾಂಡ್ ಎಲ್ಲೂ ಕೂಡಾ ಟಿಕೆಟ್ ಅವರಿಗೆ ಅಂತಾ ಹೇಳಿಲ್ಲ. ಜೆಡಿಎಸ್‌ಗೂ ಹೇಳಿಲ್ಲ, ನಮಗೂ ಹೇಳಿಲ್ಲ. ಆದರೆ ಬಿಜೆಪಿ ಮಂಡ್ಯ ಉಳಿಸಿಕೊಳ್ಳುತ್ತದೆ. ನನಗೆ ಟಿಕೆಟ್‌ ಸಿಗುತ್ತೆ ಎಂದರು.
ಮೈತ್ರಿ ವಿಚಾರವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಗಮನವೇನಿದ್ದರೂ ನನ್ನ ಕ್ಷೇತ್ರ, ನನ್ನ ಜಿಲ್ಲೆ. ನನ್ನ ಕೆಲಸ ಅಷ್ಟೇ. ನನ್ನ ಬಗ್ಗೆ ಎಲ್ಲೂ ಕಪ್ಪು ಚುಕ್ಕಿ ಇಲ್ಲ. ಒಂದೇ ಒಂದು ಕಳಂಕವೂ ಇಲ್ಲ. ಬಿಜೆಪಿ ಮಂಡ್ಯ ಉಳಿಸಿಕೊಳ್ಳುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದರು.

Previous articleಅಪಘಾತ: ಬೈಕ್ ಸವಾರರಿಬ್ಬರ ಸಾವು
Next articleಶೆಟ್ಟರ್ ಪಕ್ಷಕ್ಕೆ ಮರಳಿದ್ದು ತುಂಬ ಖುಷಿ