Home News ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ ನಿಧನ

ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ ನಿಧನ

ಬೆಂಗಳೂರು: ಚಲನಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನೆ ಗೌಡ ಇಂದು ನಿಧನರಾಗಿದ್ದಾರೆ.
ಕಳೆದ ೨೫ ವರ್ಷಗಳಿಂದ ಹಲವು ಸಿನಿಮಾಗಳಿಗೆ ಅವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ದರ್ಶನ್ ಜತೆ ಕೆಲಸಮಾಡಿದ್ದರು. ಇನ್ನು ಈ ಕುರಿತಂತೆ ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು 25 ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದಿದ್ದಾರೆ.

Exit mobile version