Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: ಬಾಡಿಗೆ ಮನೆ ಗುತ್ತಿಗೆದಾರನ ಬಂಧನ, 50 ಕೋಟಿ ರೂಪಾಯಿಗಳ ಆಸ್ತಿ ಹಗರಣ

ಬೆಂಗಳೂರು: ಬಾಡಿಗೆ ಮನೆ ಗುತ್ತಿಗೆದಾರನ ಬಂಧನ, 50 ಕೋಟಿ ರೂಪಾಯಿಗಳ ಆಸ್ತಿ ಹಗರಣ

0

ಬೆಂಗಳೂರು ನಗರ ಪೊಲೀಸರಿಗೆ ಕ್ಯಾಟೇನಾ ಹೋಮ್ಸ್ ವಿರುದ್ಧ ನೂರಾರು ಜನರು ದೂರುಗಳನ್ನು ದಾಖಲಿಸಿದ್ದರು ಮತ್ತು ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು.

ಬಾಡಿಗೆ ಮನೆಗಳನ್ನು ಗುತ್ತಿಗೆಗೆ ನೀಡುವ ಮೂಲಕ ಸಾಕಷ್ಟು ಜನರಿಗೆ 50 ಕೋಟಿ ರೂ.ಗಳಿಗೂ ಹೆಚ್ಚು ವಂಚಿಸಿದ ಆರೋಪದ ಮೇಲೆ ಪ್ರಮುಖ ಆರೋಪಿ ಆಸ್ತಿ ನಿರ್ವಹಣಾ ಸಂಸ್ಥೆ ಕ್ಯಾಟೆನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಲೀಕನನ್ನು ಅಪರಾಧ ತನಿಖಾ ಇಲಾಖೆ (CID) ಮಂಗಳವಾರ ಬಂಧಿಸಿದೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.

ಸ್ವಲ್ಪ ಸಮಯದಿಂದ ದುಬೈನಲ್ಲಿದ್ದ ಕೇಶವನ್ ಕಳೆದ ವಾರ ಗುಜರಾತ್‌ನ ” ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ವಂಚನೆಗೆ ಇಡಾದವರಿಂದ ದೂರುಗಳನ್ನು ಸಲ್ಲಿಸುವಂತೆ ಕೇಳಲಾಗಿದೆ.

ಕೇಶವನ್ ಈಗ ತನ್ನ ಬಳಿ ಯಾವುದೇ ಹಣವಿಲ್ಲ ಎಂದು ಹೇಳಿಕೊಳ್ಳುತ್ತಿರುವುದರಿಂದ ಹಣದ ಜಾಡನ್ನು ಕಂಡುಹಿಡಿಯಲು ಪೋಲಿಸ್‌ ಸಿಬ್ಬಂದಿಗಳಂದ ವಿಧಿವಿಜ್ಞಾನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕ್ಯಾಟೆನಾ ಹೋಮ್ಸ್ ಪ್ರಕರಣದಲ್ಲಿ ಸಂಸ್ಥೆಯ ಮೂವರು ಏಜೆಂಟಗಳನ್ನು ಬಂಧಿಸಲಾಯಿತು.

ಕ್ಯಾಟೆನಾ ಹೋಮ್ಸ್ ನಿವಾಸಿಗಳಿಗೆ ಮನೆಗಳನ್ನು ಗುತ್ತಿಗೆಗೆ ನೀಡುವುದಾಗಿ ಹೇಳಿದ್ದು, ಮತ್ತು ಮನೆ ಮಾಲೀಕರಿಗೆ ಘಟಕಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ ಎಂದು ಹೇಳಿದ್ದರು.

ಬೆಂಗಳೂರಿನ ಮಾರತಹಳ್ಳಿ, ಬಾಣಸವಾಡಿ, ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ಅನೇಕ ನಿವಾಸಿಗಳು, ಹೆಚ್ಚಾಗಿ ವಲಸಿಗರು, ಕಂಪನಿಯಿಂದ ಮನೆಗಳನ್ನು ಗುತ್ತಿಗೆಗೆ ಪಡೆದಿದ್ದರು. ಪೊಲೀಸರ ಪ್ರಕಾರ, ಈ ಮನೆಗಳನ್ನು ಗುತ್ತಿಗೆಗೆ ಪಡೆಯಲು ಜನರು 20 ಲಕ್ಷದಿಂದ 50 ಲಕ್ಷ ರೂ.ಗಳವರೆಗೆ ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕ್ಯಾಟೆನಾ ಹೋಮ್ಸ್ ನಷ್ಟವನ್ನು ಅನುಭವಿಸಿತು , ಏಕೆಂದರೆ ಇದರಿಂದ ಅನೇಕ ಬಾಡಿಗೆದಾರರು ತಮ್ಮ ರಾಜ್ಯಗಳಿಗೆ ಹಿಂತಿರುಗಿದರು. ಮಾಲೀಕರು ಬಾಡಿಗೆ ಹಣವನ್ನು ಸ್ವೀಕರಿಸದಿದ್ದಾಗ, ಗುತ್ತಿಗೆ ಪಾವತಿಸಿದ ಬಾಡಿಗೆದಾರರನ್ನು ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಕೇಳಿಕೊಂಡರು.

ಆದಾಗ್ಯೂ, ಕೆಲವು ಬಾಡಿಗೆದಾರರು ತೆರವಿಗೆ ತಡೆಯಾಜ್ಞೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಮತ್ತೊಂದೆಡೆ, ವಿದೇಶಗಳಲ್ಲಿ ವಾಸಿಸುತ್ತಿರುವ ಮನೆ ಮಾಲೀಕರು ಬಾಡಿಗೆ ಸಿಗದ ಕಾರಣ ಸಂಕಷ್ಟಕ್ಕೆ ಸಿಲುಕಿದರು.

ಸೆಪ್ಟೆಂಬರ್‌ನಲ್ಲಿ ನೂರಾರು ಜನರು ಬೆಂಗಳೂರು ನಗರ ಪೊಲೀಸರಿಗೆ ದೂರುಗಳನ್ನು ಸಲ್ಲಿಸಿದರು. ಹಾಗೇ ಪ್ರಕರಣವನ್ನು ಸಹ ಸಿಐಡಿಗೆ ವರ್ಗಾಯಿಸಲಾಗಿತು. ಇದರ ಮಧ್ಯ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವುದರ ವಿರುದ್ಧ ಕೇಶವನ್ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದ.

2019 ರಲ್ಲಿ, ವಿಐಪಿ ದೇವಾಲಯ ದರ್ಶನ ಮತ್ತು ಸರ್ಕಾರಿ ವಾಹನ ಸೌಲಭ್ಯಗಳನ್ನು ಪಡೆಯಲು ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕಾರಿಯಂತೆ ನಟಿಸಿದ್ದಕ್ಕಾಗಿ ಕೇಶವನ್ ಅವರನ್ನು ಬಂಧಿಸಲಾಗಿತ್ತು. ವೇಷ ಧರಿಸಿದ್ದಕಾಗಿ ದೆಹಲಿ ಹೈಕೋರ್ಟ್‌ನಿಂದ 35,000 ರೂ. ದಂಡ ವಿಧಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version