Home News ಕರ್ನಾಟಕದ ಜನತೆಗೆ ಆರನೇ ಗ್ಯಾರಂಟಿ ಸಿಕ್ಕಿದೆ

ಕರ್ನಾಟಕದ ಜನತೆಗೆ ಆರನೇ ಗ್ಯಾರಂಟಿ ಸಿಕ್ಕಿದೆ

ಯಾರೊಬ್ಬರೂ ಹಕ್ಕು ಪತ್ರ ಇಲ್ಲದೇ ಇರಬಾರದು

ಹೊಸಪೇಟೆ: ಕರ್ನಾಟಕದ ಚುನಾವಣೆಯ ಸಮಯದಲ್ಲಿ ನಾವು 5 ಭರವಸೆಗಳನ್ನು ನೀಡಿದ್ದೆವು, ಆದರೆ ಇಂದು ನಾವು 6 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸಾಧನಾ ಸಮಾವೇಶದಲ್ಲಿ ಮಾತನಾಡಿ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅವರ ಭೂಮಿಯ ಮಾಲೀಕತ್ವದ ಹಕ್ಕು ನೀಡಲಾಗಿದೆ. ಇದು ಕರ್ನಾಟಕದ ಭವಿಷ್ಯಕ್ಕೆ ಅತ್ಯಂತ ಮುಖ್ಯವಾದ ಖಾತರಿಯಾಗಿದ್ದು, ಇದು ಕೋಟ್ಯಂತರ ಕುಟುಂಬಗಳಿಗೆ, ವಿಶೇಷವಾಗಿ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಭೂಮಿ ಹೊಂದಿರುವವರು ಮಾಲೀಕತ್ವದ ಹಕ್ಕನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ ಏಕೆಂದರೆ ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು, ಒಂದು ಲಕ್ಷ ಕುಟುಂಬಕ್ಕೆ ನಾವು ಅವರ ಆಸ್ತಿಗಳ ಹಕ್ಕು ವರ್ಗಾವಣೆ ಮಾಡಿದ್ದೇವೆ. ಇಂದಿರಾಗಾಂಧಿ ಅವರು ಕನಸು ಕೂಡಾ ಇದಾಗಿತ್ತು. ಅದನ್ನ ಇವತ್ತು ನನಸು ಮಾಡಿದ್ದೇವೆ, ಇನ್ನಷ್ಟು ಪ್ರದೇಶಗಳನ್ನು ಕಂದಾಯ ಗ್ರಾಮ ಮಾಡುವ ಉದ್ದೇಶವಿದೆ. ಯಾರೊಬ್ಬರೂ ಹಕ್ಕು ಪತ್ರ ಇಲ್ಲದೇ ಇರಬಾರದು. ಗ್ಯಾರಂಟಿ ಸಮಿತಿಗಳು ಹಕ್ಕು ಪತ್ರ ಪರಿಶೀಲಿಸುವ ಕೆಲಸ ಮಾಡಬೇಕು. ನಾವು ಕೊಟ್ಟ ಯೋಜನೆ, ಹಣ ಬಡ ಜನರಿಗೆ ಅನುಕೂಲ ಆಗುತ್ತಿದೆ, ನೀವು ಕೊಟ್ಟ ತೆರಿಗೆಯನ್ನು ನಿಮಗೆ ಮರಳಿಸುತ್ತಿದ್ದೇವೆ. ಈ ದೇಶದ ಕೆಲವೇ ಕುಟುಂಬಕ್ಕೆ ಆದಾಯ ಹೋಗಬೇಕು ಎನ್ನುವುದು ಬಿಜೆಪಿ ಉದ್ದೇಶ. ಬಡ ಜನರಿಗೆ ಹಣ ಹೋಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

Exit mobile version