ಬೆಂಗಳೂರು-ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು: ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ – ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಈ ವಿಶೇಷ ರೈಲಿನ ಸಂಚಾರದಿಂದಾಗಿ ಇತರೆ ರೈಲುಗಳಲ್ಲಿ ಜನದಟ್ಟಣೆಯ ನಿಯಂತ್ರಣ ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಹಾಯಕವಾಗಲಿದೆ.

ರೈಲಿನ ವಿವರ : ಎಸ್‌ಎಂವಿಬಿ-ಬೀದರ್-ಎಸ್‌ಎಂವಿಬಿ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06539/06540)

ಈ ರೈಲು ಇದೇ ಜೂನ್ 15 ರಿಂದ ಜೂನ್ 29 ರ ವರೆಗೆ ಪ್ರತಿ ಶುಕ್ರವಾರ ಹಾಗೂ ಭಾನುವಾರದಂದು 5 ಟ್ರಿಪ್ ಸಂಚರಿಸಲಿದೆ. ನಿಗದಿತ ದಿನಗಳಂದು ರಾತ್ರಿ 09.15 ಗಂಟೆಗೆ ಎಸ್‌ಎಂವಿಬಿ ನಿಲ್ದಾಣದಿಂದ ಹೊರಡುವ ರೈಲು, ಬೆಳಿಗ್ಗೆ 11.30ಕ್ಕೆ ಬೀದರ್ ತಲುಪಲಿದೆ.
ಬೀದರ್ – ಎಸ್ಎಂವಿಬಿ (06540) ರೈಲು : ಈ ರೈಲು ಜೂನ್ 16 ರಿಂದ ಜೂನ್ 30 ರ ವರೆಗೆ ಪ್ರತಿ ಶನಿವಾರ ಹಾಗೂ ಸೋಮವಾರದಂದು 5 ಟ್ರಿಪ್ ಸಂಚರಿಸಲಿದೆ. ನಿಗದಿತ ದಿನಗಳಂದು ಮಧ್ಯಾಹ್ನ 01.00 ಗಂಟೆಗೆ ಬೀದರ್‌ನಿಂದ ಹೊರಡುವ ರೈಲು, ಬೆಳಗಿನ ಜಾವ 04.00 ಗಂಟೆಗೆ ಎಸ್‌ಎಂವಿಬಿ ನಿಲ್ದಾಣ ತಲುಪಲಿದೆ.

ಪ್ರಮುಖ ನಿಲುಗಡೆ ನಿಲ್ದಾಣಗಳು : ಹುಮನಾಬಾದ್, ಕಲಬುರ್ಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಯಲಹಂಕ,

ಕಲ್ಯಾಣ ಕರ್ನಾಟಕ ಭಾಗದ ಜನತೆ ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.