Home ತಾಜಾ ಸುದ್ದಿ ಬಹಿಷ್ಕರಿಸಿದ್ದು ತಾರತಮ್ಯ‌ ನೀತಿಯ ವಿರುದ್ಧವೇ ಹೊರತು….

ಬಹಿಷ್ಕರಿಸಿದ್ದು ತಾರತಮ್ಯ‌ ನೀತಿಯ ವಿರುದ್ಧವೇ ಹೊರತು….

0

19 ಜನ ಸಂಸದ 5 ಜನ ಕೇಂದ್ರ ಸಚಿವರೂ ಇದ್ದರೂ ಬಜೆಟ್‌ನಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ BJP-JDS ನಾಯಕರ ನಾಲಗೆಯೇ ಹೊರಳಲಿಲ್ಲ

ಬೆಂಗಳೂರು: ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದು ಕೇಂದ್ರದ ತಾರತಮ್ಯ‌ ನೀತಿಯ ವಿರುದ್ಧವೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಂದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರು‌ ನೀತಿ ಆಯೋಗದ ಸಭೆಗೆ ಹಾಜರಾಗದೆ ರಾಜ್ಯಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಮಾಜಿ CM ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಈಗ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತಾಡುವ ಬೊಮ್ಮಾಯಿಯವರು ಬಜೆಟ್‌ನಲ್ಲಿ ಕರ್ನಾಟಕದ ಪ್ರಸ್ತಾಪವೇ ಮಾಡದಿದ್ದಾಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದರು‌. 19 ಜನ ಸಂಸದ 5 ಜನ ಕೇಂದ್ರ ಸಚಿವರೂ ಇದ್ದರೂ ಬಜೆಟ್‌ನಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ BJP-JDS ನಾಯಕರ ನಾಲಗೆಯೇ ಹೊರಳಲಿಲ್ಲ. ಮೋದಿ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ. ಅದರ ಬಗ್ಗೆ ಮಾತಾಡುವ ತಾಕತ್ತಿಲ್ಲದೆ, ನೀತಿ ಸಭೆಗೆ ಹಾಜರಾಗದಿರುವುದರಿಂದ ಅನ್ಯಾಯ ಆಯಿತು ಎಂದು ಬಡಬಡಿಸುವುದು ಹಾಸ್ಯಾಸ್ಪದ. ಬಜೆಟ್‌ನಲ್ಲಿ ‌ಕರ್ನಾಟಕಕ್ಕೆ ಆದ ಅನ್ಯಾಯದ ಪ್ರತಿಭಟನಾ ರೂಪವಾಗಿ ನೀತಿ ಸಭೆಗೆ CM ಹಾಜರಾಗಿಲ್ಲ.
ಕೇವಲ ಕರ್ನಾಟಕವಲ್ಲ, ತಮಿಳುನಾಡು, ತೆಲಂಗಾಣ, ಕೇರಳ, ಪಂಜಾಬ್ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿವೆ. ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದು ಕೇಂದ್ರದ ತಾರತಮ್ಯ‌ ನೀತಿಯ ವಿರುದ್ಧವೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಂದಲ್ಲ. ಬೊಮ್ಮಾಯಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಈಗ ಸಂಸದರಾಗಿದ್ದಾರೆ. ರಾಜ್ಯದ ಮೇಲೆ ಅವರಿಗೆ ನಿಜವಾದ ಕಾಳಜಿಯಿದ್ದರೆ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿರುವ ಮೋದಿ ಸರ್ಕಾರದ ಧೋರಣೆಯನ್ನು ಪ್ರಶ್ನಿಸಲಿ ಎಂದಿದ್ದಾರೆ.

Exit mobile version