Home ತಾಜಾ ಸುದ್ದಿ ಅರಣ್ಯ ಸಚಿವರ ತವರಲ್ಲೇ ಅರಣ್ಯ ಭೂಮಿ ಒತ್ತುವರಿ

ಅರಣ್ಯ ಸಚಿವರ ತವರಲ್ಲೇ ಅರಣ್ಯ ಭೂಮಿ ಒತ್ತುವರಿ

0
ಡಿ.ಎಫ್.ಒ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ

ಡಿ.ಎಫ್.ಒ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ

ಹುಮನಾಬಾದ್: ಅರಣ್ಯ ಸಚಿವರ ತವರಿನಲ್ಲೇ ಅರಣ್ಯ ಭೂಮಿ ಒತ್ತುವರಿ ಮಾಡಲಾದ ಘಟನೆ ತಾಲ್ಲೂಕಿನ ಧುಮ್ಮನಸೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹುಮನಾಬಾದ ತಾಲ್ಲೂಕು ಧುಮ್ಮನಸೂರ ವ್ಯಾಪ್ತಿಗೆ ಒಳಪಡುವ ಸರ್ವೆ ನಂಬರ 228ರಲ್ಲಿನ ಅರಣ್ಯ ಇಲಾಖೆಗೆ ಸಂಬಂಧಪಟ್ಟ ,6.5ಎಕರೇ ಜಮೀನನ್ನು ಹುಮ್ನಾಬಾದ್ ಪಟ್ಟಣದ ಪ್ರತಿಷ್ಠಿತ ಮನೆತನದ ಸಂಗಮೇಶ ಚಿದ್ರಿ ಅವರು ಈ ಕೃತ್ಯ ಗೈದಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಮೀನು ಸರ್ವೇ ರಿಪೋರ್ಟ್ ತಮ್ಮ ಕೈಯಲ್ಲಿದ್ದು, ಭೂಮಿ ಒತ್ತುವರಿ ಹಿನ್ನೆಲೆಯಲ್ಲಿ ಸಂಗಮೇಶ ಚಿದ್ರಿ ವಿರುದ್ಧ ಎಫ್.ಐ.ಆರ್ ಸಹ ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ಇಂದು ತೆರವುಗೊಳಿಸಲಾಗುತ್ತಿದೆ ಎಂದು ಡಿ.ಎಫ್.ಒ ಎಂ.ಎಂ.ವಾನತಿ ಅವರು ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು. ಈ ವೇಳೆ ಎ.ಸಿ.ಎಫ್ ಗಳಾದ ರಾಜೇಂದ್ರ, ರಮೇಶ, ಆರ್.ಎಫ್.ಒ ಶಿವಕುಮಾರ ರಾಠೋಡ್ ಹಾಗೂ ಸಿಬ್ಬಂದಿ ಇದ್ದರು.

Exit mobile version