ನವದೆಹಲಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವಾಗಿದ್ದು, ಪಾಕ್ ವಶದಲ್ಲಿದ್ದ BSF ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬಿಡುಗಡೆ ಮಾಡಿದೆ,
20 ದಿನಗಳ ಬಳಿಕ ಪಾಕ್ನಿಂದ BSF ಯೋಧ ಬಿಡುಗಡೆಯಾಗಿದ್ದು. ಶಿಷ್ಟಾಚಾರದ ಪ್ರಕಾರ ವಾಘಾ ಬಾರ್ಡರ್ನಿಂದ ಯೋಧ ಭಾರತಕ್ಕೆ ವಾಪಸ್ ಆಗಿದ್ದಾರೆ. ಏಪ್ರಿಲ್ 23, 2025ರಂದು, ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಸೆಕ್ಟರ್‌ನಲ್ಲಿ, ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರು ಗಡಿ ಸಮೀಪದ ರೈತರಿಗೆ ರಕ್ಷಣೆ ನೀಡುವ ‘ಕಿಸಾನ್ ಗಾರ್ಡ್’ ಕರ್ತವ್ಯದಲ್ಲಿದ್ದಾಗ, ಆಕಸ್ಮಿಕವಾಗಿ ಗಡಿ ದಾಟಿದ್ದ ಆರೋಪದಲ್ಲಿ ಪಿ.ಕೆ.ಶಾ ಅವರನ್ನು ಪಾಕಿಸ್ತಾನ ಸೇನೆ ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿತ್ತು. ಇದೀಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ, ಭಾರತದ ಎಚ್ಚರಿಕೆ ಸಂದೇಶ, ಸೇನಾಧಿಕರಿಗಳ ಮಾತುಕತೆ ಬಳಿಕ ಪಾಕಿಸ್ತಾನ ಬಿಎಸ್ ಎಫ್ ಯೋಧನನ್ನು ಬಿಡುಗಡೆ ಮಾಡಿ ಕಳುಹಿಸಿದೆ.