Home ತಾಜಾ ಸುದ್ದಿ ದೇಶ ಮೊದಲು ಎನ್ನುವ ಪಕ್ಷ

ದೇಶ ಮೊದಲು ಎನ್ನುವ ಪಕ್ಷ

0

ಬೆಂಗಳೂರು: ದೇಶ ಮೊದಲು ಎನ್ನುವ ಪಕ್ಷದ ಧ್ಯೇಯವನ್ನು ಎತ್ತಿ ಹಿಡಿದ ನಮ್ಮ ಕೇಂದ್ರ ಸರ್ಕಾರಕ್ಕೆ ಹೆಮ್ಮೆಯ ಅಭಿನಂದನೆಗಳು ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿ ರದ್ದು ಮಾಡಿ ಆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಸರಿ ಎಂದು ಎತ್ತಿಹಿಡಿಯುವ ಮೂಲಕ ಮಾನ್ಯ ಸರ್ವೋಚ್ಛ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಭಾರತದ ಏಕತೆ, ಅಖಂಡತೆಯನ್ನು ರಕ್ಷಿಸಿ, ಜಮ್ಮು ಕಾಶ್ಮೀರದ ಜನತೆಗೆ ನ್ಯಾಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಟ್ಟ ದಿಟ್ಟ ಹೆಜ್ಜೆಗೆ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಮೋದನೆಯ ಬಲವೂ ಸಿಕ್ಕಿದೆ. ದೇಶ ಮೊದಲು ಎನ್ನುವ ಪಕ್ಷದ ಧ್ಯೇಯವನ್ನು ಎತ್ತಿ ಹಿಡಿದ ನಮ್ಮ ಕೇಂದ್ರ ಸರ್ಕಾರಕ್ಕೆ ಹೆಮ್ಮೆಯ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Exit mobile version