ವಿಜಯನಗರ (ಹೊಸಪೇಟೆ): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನ ಚೈನ್ ಲಿಂಕ್ ಕಟ್ಟಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿಯುತ್ತಿದೆ. ರಾತ್ರಿ 11 ಗಂಟೆಯ ಸುಮಾರಿಗೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಕಟ್ಟಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು ಹರಿದು ನದಿ ಪಾತ್ರದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ನದಿಪಾತ್ರದ ಜನರಿಗೆ ಅಲರ್ಟ್ ಆಗಿರಲು ಡ್ಯಾಂ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಜಲಾಶಯಕ್ಕೆ ತಜ್ಞರ ತಂಡದ ಬೇಟಿ ನೀಡಲಿದೆ.


























