Home ತಾಜಾ ಸುದ್ದಿ ಜೂನ್ ೨೫ರಂದು ಇನ್ನು ‘ಸಂವಿಧಾನ ಹತ್ಯಾ ದಿನ’

ಜೂನ್ ೨೫ರಂದು ಇನ್ನು ‘ಸಂವಿಧಾನ ಹತ್ಯಾ ದಿನ’

0

ನವದೆಹಲಿ: ತುರ್ತುಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಡೆಸಿರುವ ದೌರ್ಜನ್ಯವನ್ನು ನೆನಪಿಸುವ ಸಲುವಾಗಿ ಜೂನ್ ೨೫ ಅನ್ನು ಇನ್ನು ಮುಂದೆ ಪ್ರತಿ ವರ್ಷ ‘ಸಂವಿಧಾನ ಹತ್ಯಾ ದಿನ’ ಎಂದು ಆಚರಿಸಲಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಗೃಹಸಚಿವ ಅಮಿತ್ ಶಾ ಎಕ್ಸ್ ಜಾಲತಾಣದ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಜೊತೆಗೆ ಪೋಸ್ಟ್‌ಗೆ ಗೆಜೆಟ್ ಅಧಿಸೂಚನೆಯ ಫೋಟೋ ಕಾಪಿಯನ್ನು ಲಗತ್ತಿಸಿದ್ದಾರೆ.
‘ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಜೂನ್ ೨೫, ೧೯೭೫ರಂದು ತುರ್ತುಪರಿಸ್ಥಿತಿ ಹೇರುವ ಮೂಲಕ ತಮ್ಮ ಸರ್ವಾಧಿಕಾರಿ ಮನಸ್ಥಿತಿಯ ಲಜ್ಜೆಗೆಟ್ಟ ಪ್ರದರ್ಶನ ತೋರಿಸಿದ್ದರು. ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದರು. ಲಕ್ಷಾಂತರ ಅಮಾಯಕ ಜನರನ್ನು ಕಂಬಿಗಳ ಹಿಂದೆ ತಳ್ಳಿದರು ಮತ್ತು ಮಾಧ್ಯಮಗಳ ಧ್ವನಿಯನ್ನು ಅಡಗಿಸಲಾಯಿತು’ ಎಂದು ಅಮಿತ್ ಶಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

Exit mobile version