ಕೆನಡಾದ ವಿದೇಶಾಂಗ ಸಚಿವೆಯಾಗಿ ಅನಿತಾ ಆನಂದ್ ಆಯ್ಕೆ

0
26

ನವದೆಹಲಿ: ಕೆನಡಾದ ವಿದೇಶಾಂಗ ಸಚಿವೆಯಾಗಿ ಭಾರತೀಯ ಮೂಲದ ಅನಿತಾ ಆನಂದ್ ಆಯ್ಕೆಯಾಗಿದ್ದಾರೆ.
ಕೆನಡಾದ ಪ್ರಧಾನಿ ಮಾರ್ಕ್‌ಕಾರ್ನಿ ಅವರು ತಮ್ಮ ಹೊಸ ಸಂಪುಟದಲ್ಲಿ ಅನಿತಾ ಆನಂದ್ ಅವರನ್ನು ವಿದೇಶಾಂಗ ಸಚಿವೆಯ ಪ್ರಬಲ ಹುದ್ದೆಗೆ ನೇಮಿಸಿದ್ದಾರೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟ ಪುನಾರಚನೆ ವೇಳೆ ಪ್ರಧಾನಿ ಕಾರ್ನಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ್ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೊದಲು ಕೆನಡಾದ ರಕ್ಷಣಾ ಸಚಿವೆ ಸೇರಿದಂತೆ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ 58 ವರ್ಷದ ಅನಿತಾ ಆನಂದ್ ಸೇವೆ ಸಲ್ಲಿಸಿದ್ದಾರೆ. ಅನಿತಾ ಆನಂದ್ ಈ ಹಿಂದೆ ರಕ್ಷಣಾ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಈ ಕುರಿತಂತೆ ಅನಿತಾ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ನ್ಯಾಯಯುತ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

Previous articleಅಸ್ತಿತ್ವ ಕಳೆದುಕೊಳ್ಳಲಿದೆ BBMP, ಬರಲಿದೆ ಗ್ರೇಟರ್ ಬೆಂಗಳೂರು
Next articleಹಳ್ಳದಲ್ಲಿ ಬೈಕ್​ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ