Home ಅಪರಾಧ ಕುಕ್ಕರ್, ಸಿಲಿಂಡರ್‌ ಸ್ಫೋಟ: ಮೂವರು ಪೊಲೀಸರಿಗೆ ಗಾಯ

ಕುಕ್ಕರ್, ಸಿಲಿಂಡರ್‌ ಸ್ಫೋಟ: ಮೂವರು ಪೊಲೀಸರಿಗೆ ಗಾಯ

0

ಹುಬ್ಬಳ್ಳಿ: ನವನಗರದ ಖಾನಾವಳಿಯಲ್ಲಿ ಬೆಂಕಿ ಹೊತ್ತಿಕೊಂಡು ಕುಕ್ಕರ್ ಬ್ಲಾಸ್ಟ್ ಆದ ಘಟನೆ ನಡೆದಿದ್ದು, ಅನಾಹುತ ತಪ್ಪಿಸಲು ಹೋದ ಮೂವರು ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌
ಲಕ್ಷ್ಮೀ ಸಾವಜಿ ಖಾನಾವಳಿಯಲ್ಲಿ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು, ಈ ಬಗ್ಗೆ ನವನಗರ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಲು ಖಾನಾವಳಿ ಒಳಗಡೆ ಹೋಗುತ್ತಿದ್ದಂತೆಯೇ ಅಡುಗೆ ಮನೆಯಲ್ಲಿದ್ದ ಕುಕ್ಕ‌ರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಅಷ್ಟೇ ಅಲ್ಲದೇ ಸಿಲಿಂಡ‌ರ್ ಕೂಡಾ ಸ್ಫೋಟಗೊಂಡಿದೆ.
ಪರಿಣಾಮ ನವನಗರದ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಕ್ರಂ ಪಾಟೀಲ್, ರಾಮದುರ್ಗ, ಸನ್ನಿ ಹಾಗೂ ಮಂಜು ಎಂಬುವವರಿಗೆ ಗಾಯಗಳಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ನವನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version