ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಭಾಗವೂ ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಸುರಿದ ಮಳೆಗೆ ಕೆಲ ಶೆಡ್ ಮೇಲ್ಛಾವಣಿಗೆ ಅಳವಡಿಸಿದ್ದ ತಗಡುಗಳು ಹಾರಿ ಹೋಗಿದ್ದು, ಮಾರುಕಟ್ಟೆಗೆ ತೆರಳಲು ಸಜ್ಜಾಗಿದ್ದ ಒಣದ್ರಾಕ್ಷಿ ಹಾನಿಯಾಗಿದೆ.
ಜಮಖಂಡಿ ತಾಲೂಕಿನ ಸಾವಳಗಿ ಭಾಗದ ಅಡಿವುಡಿ, ತೊದಲಬಾಗಿಯಲ್ಲಿ ಸಂಜೆ ಜೋರಾಗಿ ಸುರಿದ ಮಳೆಯಿಂದಾಗಿ ಹಾನಿ ಉಂಟಾಗಿದೆ. ಕುಳಗೇರಿ ಕ್ರಾಸಿನಲ್ಲೂ ಜೋರಾಗಿ ಮಳೆಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ಥಗೊಂಡಿದೆ.