Home ಕ್ರೀಡೆ ಕಂಚು ಗೆದ್ದ ಸ್ವಪ್ನಿಲ್‌ಗೆ ₹ 1ಕೋಟಿ ಬಹುಮಾನ ಘೋಷಣೆ

ಕಂಚು ಗೆದ್ದ ಸ್ವಪ್ನಿಲ್‌ಗೆ ₹ 1ಕೋಟಿ ಬಹುಮಾನ ಘೋಷಣೆ

0

ಮುಂಬೈ: ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಮೀಟರ್‌ ಶೂಟಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್‌ ಕುಸಳೆ ಅವರಿಗೆ ಮಹರಾಷ್ಟ್ರ ಸಿಎಂ ಏಕನಾಥ ಶಿಂಧೆ ಅಭಿನಂದಿಸಿ ೧ ಕೋಟಿ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸ್ವಪ್ನಿಲ್‌ ಕುಸಳೆ ಹಾಗೂ ಅವರ ತಂದೆಯವರಿಗೆ ಕರೆ ಮಾಡಿ ಮಾತನಾಡಿರುವ ಅವರು, ಕ್ರೀಡಾಲೋಕದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದಿರುವ ಸಿಎಂ ಶಿಂಧೆ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ವಪ್ನಿಲ್ ಕುಸಳೆ ಅವರ ತಂದೆ ಸುರೇಶ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿ ಅಭಿನಂದಿಸಿದ್ದಾರೆ. ಸ್ವಪ್ನಿಲ್ ಭಾರತ ಮತ್ತು ಮಹಾರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.

Exit mobile version