Home ಕ್ರೀಡೆ ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿಯೇ ಉದ್ಘಾಟನಾ ಪಂದ್ಯ

ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿಯೇ ಉದ್ಘಾಟನಾ ಪಂದ್ಯ

0

ನವದೆಹಲಿ: ಐಸಿಸಿ 2025ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ.
ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 30ರ ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆತಿಥೇಯ ದೇಶ ಭಾರತ ಶ್ರೀಲಂಕಾದ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿದೆ.
ಒಟ್ಟು ಎಂಟು ತಂಡಗಳ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಭಾರತ ಮತ್ತು ಶ್ರೀಲಂಕಾದ ಐದು ನಗರಗಳಾದ ಬೆಂಗಳೂರು, ವಿಶಾಖಪಟ್ಟಣಂ, ಇಂದೋರ್, ಗುವಾಹಟಿ ಮತ್ತು ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿವೆ.
ಉದ್ಘಾಟನಾ ಪಂದ್ಯ, ಒಂದು ಸೆಮಿಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ, ಫೈನಲ್ ಪಂದ್ಯ ಕೊಲಂಬೊ ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ.

Exit mobile version