ಜಗಳೂರು: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಅಸುನೀಗಿದ ಘಟನೆ ಗುರುವಾರ ಮಧ್ಯಾಹ್ನ ೨ ಗಂಟೆಗೆ ಸಂಭವಿಸಿದೆ.
ಭರಮಸಮುದ್ರ ಗ್ರಾಮದ ಅಜಯ್ (18), ಓಬಳೇಶ್ (20) ತಮ್ಮದೇ ಗ್ರಾಮದ ಕೆರೆಯಲ್ಲಿ ಈಜಲು ಹೋದಾಗ ಈ ಘಟನೆ ಸಂಭವಿಸಿದೆ. ಕಳೆದ ವರ್ಷ ಸುರಿದ ಭಾರೀ ಮಳೆ ಮತ್ತು 57 ಕೆರೆ ತುಂಬಿಸುವ ಯೋಜನೆಯಿಂದ ಭರಮಸಮುದ್ರ ಕೆರೆ ಭರ್ತಿಯಾಗಿದೆ. ಒಟ್ಟು ಐವರು ಯುವಕರು ಈಜಲು ಹೋಗಿದ್ದರು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.