Home ನಮ್ಮ ಜಿಲ್ಲೆ ಆರ್‌.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

ಆರ್‌.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

0

ಬೆಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆಗಿರುವ ಆರ್.ಡಿ. ಪಾಟೀಲ್​ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದೆ.
ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವೀಲಿನಗೊಳಿಸಿ, ಒಂದೇ ಕಡೆ ವಿಚಾರಣೆ ನಡೆಸಲು ಆರ್‌.ಡಿ.ಪಾಟೀಲ್ ಮನವಿ ಮಾಡಿದ್ದ, ಇದೀಗ ಆರ್‌.ಡಿ.ಪಾಟೀಲ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ. ಇದರಿಂದ ಪ್ರಕರಣ ಕಿಂಗ್‌ಪಿನ್‌ಗೆ ದೊಡ್ಡ ಸಂಕಷ್ಟ ಎದುರಾದಂತಾಗಿದೆ. ಈಗಾಗಲೇ ಆರ್.ಡಿ.ಪಾಟೀಲ್ ಕೆಇಎ ಪರೀಕ್ಷಾ ಅಕ್ರಮದ ವಿಚಾರಣೆ ಎದುರಿಸುತ್ತಿದ್ದಾನೆ. ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪ್ರತ್ಯೇಕವಾಗಿ 11 ಎಫ್‍ಐಆರ್‌ಗಳು ದಾಖಲಾಗಿವೆ.

Exit mobile version