Home ಅಪರಾಧ ಅಪಘಾತ: ಲಾರಿ ಚಾಲಕ ಸಾವು

ಅಪಘಾತ: ಲಾರಿ ಚಾಲಕ ಸಾವು

0

ಕೊಪ್ಪಳ(ಕುಷ್ಟಗಿ): ಪಟ್ಟಣದ ರಾಷ್ಟೀಯ ಹೆದ್ದಾರಿ-೫೦ರ ಕುರುಬನಾಳ ಕ್ರಾಸ್ ಹತ್ತಿರ ಲಾರಿಯೊಂದಕ್ಕೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತ ಲಾರಿ ಚಾಲಕ ತಮಿಳುನಾಡಿನ ಧರ್ಮಪರಿ ಜಿಲ್ಲೆಯ ಪಳಕೋಡ ತಾಲ್ಲೂಕಿನ ನಕ್ಕಲಪಟ್ಟಿ ಗ್ರಾಮದ ಮಾರಿಯಪ್ಪನ್ ಪೊನ್ನನ್(42) ಎಂದು ಗುರುತಿಸಲಾಗಿದೆ.
ಗ್ರ‍್ಯಾನೇಟ್ ಕಲ್ಲು ಹೆರಿಕೊಂಡು ಇಳಕಲ್ ಕಡೆಯಿಂದ ಹೊಸಪೇಟೆ ಕಡೆ ಹೋಗುವಾಗ ಕುರುಬನಾಳ ಕ್ರಾಸ್ ಹತ್ತಿರದ ತಾಯಮ್ಮ ದೇವಿ ದೇವಸ್ಥಾನದ ಸಮೀಪ ಲಾರಿಗೆ ಹಿಂಬದಿಯಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮಾರಿಯಪ್ಪನ್‌ಗೆ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮತ್ತೊಂದು ಲಾರಿ ಚಾಲಕ ಸೆಲ್ವಂ ಚಿನ್ನಸ್ವಾಮಿ(31) ಗಾಯಗೊಂಡಿದ್ದಾನೆ.

Exit mobile version