Home ಅಪರಾಧ ಅಪಘಾತ: ಮತದಾನಕ್ಕೆ ತೆರಳುತ್ತಿದ್ದ ಯುವಕ ಸಾವು

ಅಪಘಾತ: ಮತದಾನಕ್ಕೆ ತೆರಳುತ್ತಿದ್ದ ಯುವಕ ಸಾವು

0

ಕುಷ್ಟಗಿ: ಮತದಾನ ಮಾಡಲೆಂದ ಬೈಕ್‌ನಲ್ಲಿ ಊರಿಗೆ ಬರುತ್ತಿದ್ದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಹಾವೇರಿಯ ಬ್ಯಾಂಕ್‌ ಉದ್ಯೋಗಿ ಮುತ್ತಣ್ಣ ಈರಪ್ಪ ಸಾಹುಕಾರ(28) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಹಾವೇರಿಯಿಂದ ಗುನ್ನಾಳ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

Exit mobile version