Home News ಅಪಘಾತ: ಇಬ್ಬರು ಸಾವು

ಅಪಘಾತ: ಇಬ್ಬರು ಸಾವು

ಹೊಸದುರ್ಗ: ಬೊಲೆರೋ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿ ಣಾಮ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ತಾಲೂಕಿನ ಹಾಗಲಕೆರೆ ಹ್ಯಾಂಡ್ ಪೋಸ್ಟ್ ಸಮೀಪ ಮುಂಜಾನೆ ನಡೆದಿದೆ.
ಹುಳಿಯಾರು ಪಂಚನಹಳ್ಳಿ ಸಮೀಪದ ಬಿಟ್ಟೇನಹಳ್ಳಿ ಗ್ರಾಮದ ಶಿವಣ್ಣ, ನಾಗ ರಾಜು ಮೃತಪಟ್ಟವರು. ಈ ಇಬ್ಬರು ಹೊಸದುರ್ಗದ ಎಪಿಎಂಸಿ ಮಾರುಕಟ್ಟೆಗೆ ಕಾಯಿ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದಾಗ ಕೋಳಿಗಳನ್ನು ತುಂಬಿ ಕೊಂಡಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರರು ಸಾವು ಕಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಬೊಲೆರೋ ವಾಹನ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version