Home ತಾಜಾ ಸುದ್ದಿ ಅಣುಶಕ್ತಿ ರಾಷ್ಟ್ರವಾಗಿ 50 ವರ್ಷಗಳು!

ಅಣುಶಕ್ತಿ ರಾಷ್ಟ್ರವಾಗಿ 50 ವರ್ಷಗಳು!

0

ಬೆಂಗಳೂರು: ಇಂದಿಗೆ ಭಾರತವು ಅಣುಶಕ್ತಿ ರಾಷ್ಟ್ರವಾಗಿ 50 ವರ್ಷಗಳಾದವು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 18ನೇ ಮೇ 1974ರ ಈ ದಿನದಂದು ರಾಜಸ್ಥಾನದ ಪೋಕ್ರಾನ್ ನಲ್ಲಿ ನ್ಯೂಕ್ಲಿಯರ್ ಬಾಂಬ್ ಸ್ಪೋಟ ನಡೆಸಲಾಯಿತು. ಭಾರತ ಕೈಗೊಂಡ ಈ ಪರಮಾಣು ಸಾಹಸ ವೈರಿಗಳೆದೆಯಲ್ಲಿ ನಡುಕ ತಂದಿತಲ್ಲದೆ ಭೌಗೋಳಿಕ ರಾಜಕಾರಣದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿತು.
‘ಬುದ್ಧ ಸ್ಮೈಲಿಂಗ್’ ಹೆಸರಿನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ಬಾಹ್ಯ ಶಕ್ತಿಗಳಿಗೆ ಮಣಿಯದೆ ಈ ಕಾರ್ಯಚರಣೆಯನ್ನು ಯಶಸ್ವಿಗೊಳಿಸಿ ಭಾರತವನ್ನು ಅಣುಶಕ್ತಿ ರಾಷ್ಟ್ರವನ್ನಾಗಿ ಮಾಡಿದರು ಎಂದಿದ್ದಾರೆ.

Exit mobile version