Home ನಮ್ಮ ಜಿಲ್ಲೆ ಹುಚ್ಚುನಾಯಿ ಕಡಿತ: ಹಲವರಿಗೆ ಗಾಯ

ಹುಚ್ಚುನಾಯಿ ಕಡಿತ: ಹಲವರಿಗೆ ಗಾಯ

0

ಬೆಳಗಾವಿ: ನಗರದ ಜನನಿಬಿಡ ಪ್ರದೇಶವಾದ ಗಣಪತಿ ಗಲ್ಲಿ,ಬಾಪಟಗಲ್ಲಿ, ಕಡೋಲ್ಕರ ಗಲ್ಲಿ ಯಲ್ಲಿ ಸುತ್ತಾಡುತ್ತಿದ್ದ ಹುಚ್ಚುನಾಯಿ ಹಲವರಿಗೆ ಕಡಿದು ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಸುಮಾರು ೭ ಗಂಟೆ ವೇಳೆಗೆ ಧುತ್ತನೆ ಪ್ರತ್ಯಕ್ಷವಾದ ಹುಚ್ಚುನಾಯಿ ಕಂಡವರ ಮೇಲೆಲ್ಲಾ ದಾಳಿ ಮಾಡಿದೆ.
ತೀವ್ರ ಗಾಯಗೊಂಡ ಆರು ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇತರೆ ಐವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಸಮಾಜ ಸೇವಕರು ಹುಚ್ಚು ನಾಯಿ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Exit mobile version