ಸಿಡಿದೆದ್ದಿರುವ ಲಿಂಗಾಯತ ನಾಯಕರನ್ನು ಸಮಾಧಾನಪಡಿಸಿ

0
19

ಬಾಗಲಕೋಟೆ: ರಾಜ್ಯದ ಲಿಂಗಾಯತ ನಾಯಕರೆಲ್ಲ ಸಿಡಿದೆದ್ದು ಬಿಜೆಪಿ ತೊರೆಯುತ್ತಿದ್ದಾರೆ. ಅದನ್ನು ನೋಡಿಕೊಳ್ಳುವುದನ್ನು ಬಿಟ್ಟು ಆ ಪಕ್ಷದ ಕೆಲ ನಾಯಕರು ಕಾಂಗ್ರೆಸ್ ಶಾಸಕರ ಕಡೆಗೆ ನೋಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತ ನಾಯಕರು ತಮ್ಮ ಕಡೆಗಣನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ತೊರೆಯಲು ಮುಂದಾಗಿರುವಾಗ ಆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ತಮ್ಮ ಜತೆಗೆ ೪೫ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಮೊದಲು ತಮ್ಮ ಪಕ್ಷದ್ದನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ಕಾಂಗ್ರೆಸ್ ಬಗ್ಗೆ ಯೋಚಿಸಲಿ ಎಂದು ತಿವಿದರು.
ವಿಪ ಸದಸ್ಯ ಪ್ರದೀಪ ಶೆಟ್ಟರ್ ಸಹ ಬಿಜೆಪಿ ಬಗ್ಗೆ ಅಸಮಾಧಾನ ಹೊರಹಾಕಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಲಿಂಗಾಯತರ ಕಡೆಗಣನೆ ಆಗುತ್ತಿದೆ ಎಂದು ನೋವು ಹೊರಹಾಕಿದ್ದಾರೆ. ಸರಿಪಡಿಸುವುದು ಬಿಡುವುದು ಅವರ ನಾಯಕರಿಗೆ ಬಿಟ್ಟ ವಿಚಾರ ಎಂದರು.

Previous articleಲಿಂಗಾಯತರನ್ನು ಬೇರೆಯವರು ತುಳಿಯುತ್ತಿದ್ದಾರೆ, ಬಿಜೆಪಿಯಲ್ಲ
Next articleಮುರಿದ ಬಾರ್ಜ್: ನದಿ ಮಧ್ಯೆ ಸಿಲುಕಿದ ಪ್ರಯಾಣಿಕರು