ನವದೆಹಲಿ: ಕೇಂದ್ರ ಬಜೆಟ್ನ ಮುಂದುವರೆದ ಲೋಕಸಭೆ ಅಧಿವೇಶನದ ಎರಡನೇ ಹಂತದ ಕಲಾಪದ ಮೊದಲ ದಿನವಾದ ಇಂದು ಆರಂಭದಲ್ಲೇ ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲದಿಂದ ಬೋಜನ ವಿರಾಮದವರೆಗೂ ಮುಂದೂಡಿಕೆಯಾಗಿದೆ.
ರಾಹುಲ್ಗಾಂಧಿ ದೇಶದ ಪ್ರಜಾಪ್ರಭುತ್ವದ ವಿರುದ್ಧವಾಗಿ ವಿದೇಶಿ ನೆಲದಲ್ಲಿ ಮಾತನಾಡಿದ್ದಾರೆ ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ನೇತೃತ್ವದಲ್ಲಿ ಆಗ್ರಹಿಸಿದಾಗ ಇದಕ್ಕೆ ಪ್ರತಿಯಾಗಿ ‘ರಾಜ್ಯಸಭಾ ಸದಸ್ಯರಲ್ಲದ ನಾಯಕರನ್ನು ಸದನಕ್ಕೆ ಕರೆಯಬೇಕೆಂಬ ಬೇಡಿಕೆ ಖಂಡನೀಯ’ ಎಂದರು. ಖರ್ಗೆ ಅವರು, ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ನೆನಪಿಸಿಕೊಂಡರು. ಆದರೆ, ಆಡಳಿತಾರೂಢ ಪಕ್ಷದ ಸದಸ್ಯರು ಅದಕ್ಕೆ ಅಡ್ಡಿಪಡಿಸಿದವು. ಈ ಹಂತದಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.