Home ಅಪರಾಧ ವಿಚಾರಣೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲು ಸೇತುವೆಯಿಂದ ಬಿದ್ದು ಆರ್ ಟಿಐ ಕಾರ್ಯಕರ್ತ ಸಾವು

ವಿಚಾರಣೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲು ಸೇತುವೆಯಿಂದ ಬಿದ್ದು ಆರ್ ಟಿಐ ಕಾರ್ಯಕರ್ತ ಸಾವು

0

ದಾವಣಗೆರೆ: ಮೂರು ನಿವೇಶನಗಳನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ ಆರ್ ಟಿ ಐ ಕಾರ್ಯಕರ್ತನೊಬ್ಬನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಿರುವಾಗ ತೋಳಹುಣಸೆ ಸಮೀಪದ ಸೇತುವೆ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗಿನ ಜಾವ 2:30 ರ ಸುಮಾರಿಗೆ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಹರೀಶ್ ಎಚ್. ಆರ್. (40) ಮೃತರು. ನಕಲಿ ದಾಖಲೆ ಸೃಷ್ಟಿಸಿರುವ ಆರೋಪದ ಮೇರೆಗೆ ಗಾಂಧಿನಗರ ಠಾಣೆಯ ಪೊಲೀಸರು ಹರೀಶ್ ಅವರನ್ನು ತಾಲ್ಲೂಕಿನ ಕಾಕನೂರಿನಿಂದ ಗಾಂಧೀನಗರ ಠಾಣೆಗೆ ಕರೆತರುವ ವೇಳೆ ದಾವಣಗೆರೆ ಹೊರವಲಯದ ತೋಳಹುಣಸೆಯ ಸಮೀಪ ಮೇಲ್ಸೇತುವೆಯ ಬಳಿ ಬರುತ್ತಿದ್ದಾಗ ಹರೀಶ್ ಕಾರಿನಿಂದ ಜಿಗಿದು ಸರ್ವೀಸ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಎಸ್ ಎಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತ ಹರೀಶ್ ಪತ್ನಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ ಎಂದು ಆರೋಪಿಸಿದ್ದು, ಗಾಂಧಿನಗರ ಎಸ್ಐ ಕೃಷ್ಣಪ್ಪ, ಕಾನ್ಸ್ ಸ್ಟೆಬಲ್ ದೇವರಾಜ್, ಕಾರು ಚಾಲಕ ಇರ್ಷಾದ್ ಅವರು ನನ್ನ ಪತಿಯನ್ನು ದೌರ್ಜನ್ಯದಿಂದ ಎಳೆದುಕೊಂಡು ಕೊಲೆ ಮಾಡಿದ್ದಾರೆ. ಈ ಕೊಲೆಯ ಹಿಂದೆ ಕಣಿವೆ ಬಿಳಚಿಯ ಕೆ.ಬಾಬುರಾವ್ ಅವರ ಕೈವಾಡವಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Exit mobile version