Home ಅಪರಾಧ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ವ್ಯವಸ್ಥಾಪಕ

ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ವ್ಯವಸ್ಥಾಪಕ

0

ದಾವಣಗೆರೆ: ಜಕಾತಿ ಸಂಬಂಧ ಟೆಂಡರ್ ಕೊಡಲು ಲಂಚ ಪಡೆಯುತ್ತಿದ್ದ ವೇಳೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದದ್ದಾರೆ.
ಕೃಷ್ಣಪ್ಪ ಎಂಬುವವರಿಗೆ ಜಕಾತಿ ನೀಡಲು 7ಲಕ್ಷ ರು ಗೆ ಬೇಡಿಕೆ ಇಟ್ಟಿದ್ದ, ವೆಂಕಟೇಶ್‌ಗೆ ಕೃಷ್ಣಪ್ಪ ಅವರು ಮುಂಗಡವಾಗಿ 2 ಲಕ್ಷ ರು, ನೀಡಿದ್ದರು. ಉಳಿದ 5 ಲಕ್ಷ ಕೊಡಲು ಸಾಧ್ಯವಾಗುವುದಿಲ್ಲ. 3 ಲಕ್ಷ ಮಾತ್ರ ಕೊಡುತ್ತೇನೆ ಎಂದು ಕೃಷ್ಣಪ್ಪ ಕೊಡಲು ತೆರಳಿದಾಗ, ಹಣವನ್ನು ಪಡೆಯುತ್ತಿದ್ದ ವೇಳೆ ವೆಂಕಟೆಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಪಡೆದ ಲಂಚದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೂ ಪಾಲು ಇರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದ್ದು, ತನಿಖೆ ಬಳಿಕವಷ್ಟೇ ನಿಜಾಂಶ ಹೊರಬರಲಿದೆ.

Exit mobile version