Home ನಮ್ಮ ಜಿಲ್ಲೆ ಭಾರಿ ಗಾಳಿ: ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಭಾರಿ ಗಾಳಿ: ನೆಲಕ್ಕುರುಳಿದ ವಿದ್ಯುತ್ ಕಂಬಗಳು

0

ಬೈಲಹೊಂಗಲ: ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ಶುಕ್ರವಾರ ಸಂಜೆ ಏಕಾಏಕಿ ಬಿರುಗಾಳಿ ಬೀಸುತ್ತಿದ್ದಂತೆ ಗ್ರಾಮದ ವಿವಿಧ ಕಡೆ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮನೆಗಳ ಪತ್ರಾಸ್, ಬೃಹತ್ ಮರಗಳು ಧರೆಗುರುಳಿವೆ. ಬಿರುಗಾಳಿ ಬೀಸಿದ ರಬಸಕ್ಕೆ ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನ, ಸೈಕಲ್‌ಗಳು ನೆಲಕಪ್ಪಳಿಸಿವೆ. ರೈತರ ಜಮೀನುಗಳಲ್ಲಿನ ಕೃಷಿ ಪರಿಕರು ಕೆಲವು ಕಡೆ ಹಾರಿ ಹೋಗಿವೆ.
ಗ್ರಾಮದ ಬೆಳಗಾವಿ ಮುಖ್ಯ ರಸ್ತೆ ಮಧ್ಯದಲ್ಲಿ ಬೃಹತ್ ಮರ ಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೈಲಹೊಂಗಲ ಮಾರ್ಗದಿಂದ ಸಂಪಗಾಂವ, ಬೆಳಗಾವಿಗೆ ತೆರಳುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮಸೀದಿ ಹತ್ತಿರದ ಪೊಲೀಸ್ ಠಾಣೆ ಪಕ್ಕದಲ್ಲಿ ಬೃಹತ್ ಮರ ಧರೆಗುರುಳಿದೆ. ಹೆಸ್ಕಾಂ ಕೇಂದ್ರ ಆವರಣದಲ್ಲಿನ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Exit mobile version