Home ಅಪರಾಧ ಬೈಕ್ ಓವರ್‌ಟೇಕ್ ವಿಚಾರಕ್ಕೆ ಹಲ್ಲೆ: ಯುವಕ ಸಾವು

ಬೈಕ್ ಓವರ್‌ಟೇಕ್ ವಿಚಾರಕ್ಕೆ ಹಲ್ಲೆ: ಯುವಕ ಸಾವು

0

ಯಲ್ಲಾಪುರ: ಹುಣಶೆಟ್ಟಿಕೊಪ್ಪದಲ್ಲಿ ಬೈಕ್ ಓವರ್ ಟೆಕ್ ಮಾಡುವ ವಿಚಾರಕ್ಕಾಗಿ ಯುವಕನ ಮೇಲೆ ಹಲ್ಲೆ ನಡೆದು ಮೃತಪಟ್ಟಿರುವ ಘಟನೆ ನಡೆದಿದೆ
ಹಳಿಯಾಳ ತಾಲೂಕು ಗುಂಡಳ್ಳಿಯ ಕಾಮತಿಕೊಪ್ಪ ನಿವಾಸಿ ಪ್ರಜ್ವಲ ಪ್ರಕಾಶ ಕಕ್ಕೇರಿಕರ(೨೪) ಘಟನೆಯಲ್ಲಿ ಸಾವನ್ನಪ್ಪಿದ ಯುವಕ. ಈತ ತನ್ನ ಬೈಕ್ ಮೇಲೆ ಯಲ್ಲಾಪುರದಿಂದ ಹುಣಶೆಟ್ಟಿಕೊಪ್ಪ ಜಾತ್ರೆಗೆ ಹೋಗಿ ಬರುವಾಗ ಎದುರಿಗೆ ಹೋಗುತ್ತಿದ್ದ ಬೈಕ್‌ನ್ನು ಓವರ್ ಟೇಕ್ ಮಾಡಿದ್ದರಿಂದ ಮೋಟಾರ ಸೈಕಲ್ಲಿನ ಮೇಲೆ ಕಾರ್ ಮೇಲೆ ಬಂದ ಯುವಕರು ಅವಾಚ್ಯವಾಗಿ ಬೈದು ಎಲ್ಲರೂ ಸೇರಿ ಪ್ರಜ್ವಲನಿಗೆ ಥಳಿಸಿ ರಾಡ್‌ನಿಂದ ಬಲವಾಗಿ ಹಲ್ಲೆ ಮಾಡಿ ಹೊಡೆದು ನೆಲಕ್ಕೆ ಬೀಳಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಮೃತನ ಸಹೋದರ ಉಜ್ವಲ ಪ್ರಕಾಶ ಕಕ್ಕೇರಿಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಶೆಟ್ಟಿಕೊಪ್ಪದ ನಿವಾಸಿಗಳಾದ ಸಾಣಾ ಮರಾಠಿ, ಅನಿಕೇತ ಮಿರಾಸಿ, ರಿತೇಶ ಪಾಟೀಲ, ಪಾಂಡುರಂಗ ಕಳುಸೂರಕರ, ಪ್ರಶಾಂತ ಕಳಸೂರಕರ, ರೂಪೇಶ ಯಾನೇ ಸತೀಶ ಅವರ ಮೇಲೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Exit mobile version