ಚಿಕ್ಕೋಡಿ: ರಾತ್ರಿ ಮಲಗಿದ್ದ ವೇಳೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಘಟನೆ ಹಾರೂಗೇರಿಯಲ್ಲಿ ನಡೆದಿದೆ. ಮಲ್ಲಪ್ಪ ಉಪ್ಪಾರ ಕೊಲೆ ಮಾಡಿದ ವ್ಯಕ್ತಿ. ಪತ್ನಿ ರುಕ್ಮವ್ವಾ (29) ರಾತ್ರಿ ಮನೆಯಲ್ಲಿ ಮಲಗಿದ್ದಾಗ ಕಲ್ಲು ಎತ್ತಿಹಾಕಿ ಹತ್ಯೆ ಗೈದಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಾರೂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಮಲ್ಲಪ್ಪನನ್ನು ವಶಕ್ಕೆ ಪಡೆದಿದ್ದಾರೆ.