ಬೆಳಗಾವಿ: ನಮ್ಮ ಸರ್ಕಾರ ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ಅವಶ್ಯಕತೆಯೂ ನಮಗಿಲ್ಲ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುನಿರತ್ನ ಅವರು ಹಾಗೆಲ್ಲಾ ಮಾತನಾಡಿದ್ದು ತಪ್ಪು. ಒಂದು ಸಮುದಾಯದ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಅವರ ಬಂಧನವಾಗಿದೆ. ಅದರಲ್ಲಿ ರಾಜಕೀಯ ದ್ವೇಷ ಏನಿದೆ ಎಂದು ಮರುಪ್ರಶ್ನೆ ಮಾಡಿದರು. ಅಷ್ಟಕ್ಕೂ ದ್ವೇಷದ ರಾಜಕಾರಣ ಮಾಡುವರು ಯಾರು ಎಂಬುದು ನಿಮಗೆ ಗೊತ್ತಿದೆ. ದ್ವೇಷ ರಾಜಕಾರಣಕ್ಕೆ ನಾನು ಬಲಿಪಶುವಾಗಿದ್ದೇನೆ ಎಂದು ಭಾವುಕರಾದರು.