ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ

0
12

ಹೊಸಪೇಟೆ: ತಿರುಪತಿ ಲಡ್ಡು ವಿಷಯದಲ್ಲಿ ಆರೋಪ ಬಂದ ನಂತರ ಮತ್ತೆ ನಂದಿನ ತುಪ್ಪ ಕಳಿಸುವಂತೆ ಟಿಟಿಡಿಯಿಂದ ಬೇಡಿಕೆ ಬಂದಿದ್ದು, ಕಳೆದ ೧೫ ದಿನಗಳಿಂದ ನಂದಿನ ತುಪ್ಪು ರಫ್ತು ಆಗುತ್ತಿದೆ ಎಂದು ಕೆ.ಎಂ.ಎಫ್.ಅಧ್ಯಕ್ಷ ಭೀಮಾನಾಯ್ಕ್ ಹೇಳಿದರು.
ಟಿ.ಬಿ.ಡ್ಯಾಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ೨೦೨೦ ರಿಂದ ೨೦೨೪ ಪ್ರಾರಂಭದವರಗೆ ನಂದಿನಿ ಬ್ರಾಂಡ್‌ನ ಯಾವುದೇ ಉತ್ಪನ ತಿರುಪತಿಗೆ ಕಳಿಸಲಾಗಿಲ್ಲ. ಮತ್ತೆ ಇದೀಗ ಟಿಟಿಡಿಯಿಂದ ಬೇಡಿಕೆ ಬಂದಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಪ್ಪ ಸೇರಿದಂತೆ ಎಲ್ಲಾ ಪ್ರಾಡಕ್ಟ್ ಹೆಚ್ಚು ಪ್ರಮಾಣದಲ್ಲಿ ಸ್ಟಾಕ್ ಇದೆ ಎಂದರು. ದೇಶದಲ್ಲಿ ನಂದಿನಿ ಬ್ರಾಂಡ್‌ನ ವಿಸ್ವಾಸಕ್ಕೆ ಸಮಸ್ತ ಕನ್ನಡಿಗರು ಹೆಮ್ಮೆ ಪಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತುಪ್ಪ ತುಂಬಿದ ಟ್ಯಾಂಕರ್ ವಿಷಯದಲ್ಲಿ ಅನಾನುಕೂಲವಾಗದಂತೆ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಟ್ಯಾಂಕರ್ ವಿಷಯದಲ್ಲಿ ಯಾವುದೇ ರೀತಿಯ ಕಲಬೆರಕೆಯಾಗದಂತೆ ಜಾಗ್ರತೆ ವಹಿಸಲಾಗಿದೆ ಎಂದರು.

Previous articleವೇದಿಕೆಯಲ್ಲಿ ಕುಳಿತು ಬೆಳೆದವರು ಸಮಾಜ ಬೆಳೆಸಲಿಲ್ಲ…
Next articleಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಚಿತ್ರದುರ್ಗದ ವಿಜ್ಞಾನಿ