Home ಅಪರಾಧ ಗೋವಾ ಮದ್ಯ ವಶ: ಆರೋಪಿ ಬಂಧನ

ಗೋವಾ ಮದ್ಯ ವಶ: ಆರೋಪಿ ಬಂಧನ

0

ಜೋಯಿಡಾ: ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲುಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೆಟ್‌ಬಳಿ ರವಿವಾರ ನಸುಕಿನಲ್ಲಿ ನಡೆದಿದೆ.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಬರುತ್ತಿದ್ದ ಕೆಎ 22 ಡಿ. 0702 ಸಂಖ್ಯೆಯ ಅಶೋಕ ಲೈಲೆಂಡ್ ವಾಹನವನ್ನು ಖಚಿತ ಮಾಹಿತಿಯನ್ನಾಧರಿಸಿ ಅನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ಹತ್ತಿರ ಪರಿಶೀಲಿಸಿದಾಗ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ವಾಹನದಲ್ಲಿದ್ದ 62.250 ಲೀ. ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದು, ವಾಹನವನ್ನು ಜಪ್ತಿಮಾಡಿಕೊಂಡಿದ್ದಾರೆ.
ವಾಹನದಲ್ಲಿದ್ದ ಚಾಲಕ ಜೋಯಿಡಾ ತಾಲೂಕಿನ ಪಣಶೋಲಿಯ ಗೋವಿಂದ ಚಿನ್ನನವರ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಮದ್ಯ ಹಾಗೂ ವಾಹನದ ಬೆಲೆ ಅಂದಾಜು ಮೌಲ್ಯ ೧೨,೬೫,೩೩೧ ರೂ. ಆಗಿರುವ ಬಗ್ಗೆ ಮಾಹಿತಿ ಇದೆ.

Exit mobile version