Home ನಮ್ಮ ಜಿಲ್ಲೆ ಇಳಕಲ್‌ನಲ್ಲಿ ಜೆಸಿಬಿಯಿಂದ ಶೆಡ್ಡುಗಳ ತೆರವು

ಇಳಕಲ್‌ನಲ್ಲಿ ಜೆಸಿಬಿಯಿಂದ ಶೆಡ್ಡುಗಳ ತೆರವು

0

ಇಳಕಲ್: ಇಲ್ಲಿನ ಗುರುಲಿಂಗಪ್ಪ ಕಾಲೋನಿಯಲ್ಲಿ ಹಾಕಲಾದ ತಗಡಿನ ಶೆಡ್ಡುಗಳ ತೆರವುಗೊಳಿಸುವ ಕಾರ್ಯವನ್ನು ನಗರಸಭೆಯ ಸಿಬ್ಬಂದಿ ಸೋಮವಾರ ಮುಂಜಾನೆಯಿಂದಲೇ ಆರಂಭಿಸಿತ್ತು.
ಈ ಕಾಲೋನಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದ್ದು, ಅದಕ್ಕಾಗಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡಲಾಗಿದೆ. ‌‌ಆದರೆ ಅಲ್ಲಿ ಈಗಾಗಲೇ ವಾಸಿಸುವ ಜನರು ನಮಗೆ ಹಕ್ಕುಪತ್ರ ಮತ್ತು ನಿವೇಶನ ಕೊಡಿ, ಅಲ್ಲಿಯವರೆಗೆ ಶೆಡ್ಡುಗಳನ್ನು ಖಾಲಿ ಮಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದರಿಂದ ಹೆಚ್ಚಿನ ಪೊಲೀಸರನ್ನು ಕರೆಸಿ ತೆರವು ಕಾರ್ಯಾಚರಣೆ ನಡೆಸಿದೆ.
ಸ್ಥಳಕ್ಕೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತೆರಳಿ, ಅಲ್ಲಿಯ ಜನರ ಜೊತೆಗೆ ಮಾತನಾಡಿ, ನಗರಸಭೆ ಕಾರ್ಯಾಲಯದ ಮುಂದೆ ಹೋರಾಟ ಮಾಡೋಣ ಬನ್ನಿ ಎಂದು ಹೇಳಿದ್ದಾರೆ.

ಇಳಕಲ್‌ನಲ್ಲಿ ಜೆಸಿಬಿಯಿಂದ ಶೆಡ್ಡುಗಳ ತೆರವು

Exit mobile version