Home ತಾಜಾ ಸುದ್ದಿ KSRTC ಬಸ್ಸಿನಲ್ಲೇ ಮಗುವಿಗೆ ಜನ್ಮ…

KSRTC ಬಸ್ಸಿನಲ್ಲೇ ಮಗುವಿಗೆ ಜನ್ಮ…

0

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ತ್ರಿಶೂರ್ ನಿಂದ ತೊಟ್ಟಿಲ್ಪಾಲಮ್‌ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಸ್ ಚಾಲಕ ತಕ್ಷಣ ಮಾರ್ಗವನ್ನು ಬದಲಿಸಿ ಅಮಲಾ ಆಸ್ಪತ್ರೆಯ ಕಡೆಗೆ ಹೊರಟರು. ಕೂಡಲೇ ಹೆರಿಗೆ ಬಗ್ಗೆ ಬಸ್ ಸಿಬ್ಬಂದಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯನ್ನು ತಲುಪಿದ ನಂತರ, ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಲಾಯಿತು, ವೈದ್ಯರು ಮತ್ತು ದಾದಿಯರು ತಕ್ಷಣವೇ ಬಸ್ ಏರಿದ್ದರು. ಅಮಲಾ ಆಸ್ಪತ್ರೆಯ ಬಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಸಕಾಲಿಕ ನೆರವಿನಿಂದ ಅವರು ಬಸ್ನೊಳಗೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಚಾಲಕ ಹಾಗೂ ಆರೋಗ್ಯ ಕಾರ್ಯಕರ್ತರ ಸಮಯಪ್ರಜ್ಞೆ ಹಾಗೂ ಸೇವೆಗೆ ನೆಟ್ಟಿಗರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

Exit mobile version