ಶ್ರೀರಂಗಪಟ್ಟಣ: ಸರ್ಕಾರವನ್ನು ಎಚ್ಚರಿಸಲು ರೈತರಿಂದ ಬಾರ್ ಕೋಲು ಚಳುವಳಿ

0
27

ಶ್ರೀರಂಗಪಟ್ಟಣ: ಕಾವೇರಿ ನೀರು ಬಿಡುಗಡ ವಿಷಯಾಗಿ ಸರ್ಕಾರ ನಿದ್ದೆ ಮಾಡುತ್ತಿದ್ದು, ಬಡಿದೆಬ್ಬಿಸುವ ಸಲುವಾಗಿ ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡರು ಬಾರ್ ಕೋಲು (ಚಾವಟಿ) ಹಿಡಿದು ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದ ಕುವೆಂಪು ವೃತ್ತದಲ್ಲಿ ಬಾರ್ ಕೋಲು ಬೀಸುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಟ್ಟಣದ ಮುಖ್ಯ ಬೀದಿಯಲ್ಲಿ ಬಾರುಕೋಲು ಹಿಡಿದ ತಾಲೂಕು ಕಚೇರಿವರೆಗೆ‌ ಮೆರವಣಿಗೆ ನಡೆಸಿ, ತಾಲ್ಲೂಕು ಕಚೇರಿ‌ ಎದುರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.


ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ರಾಜ್ಯ ಸರ್ಕಾರ ಸತ್ತಂತೆ ಮಲಗಿದ್ದು, ಇವತ್ತು ಬಾರ್ ಕೋಲು ಹಿಡಿದಿರುವ ನಾವು ಅವರನ್ನು ಎಬ್ಬಿಸಲು ಮತ್ತಷ್ಟು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Previous articleಮಂಡ್ಯ: ದಿನೇ ದಿನೇ ಹೆಚ್ಚುತ್ತಿದೆ ಕಾವೇರಿ ಕಾವು
Next articleನಿರಂಕುಶ ಪ್ರಭುತ್ವದ ನಿರ್ಗಮನಕ್ಕೆ ಕ್ಷಣಗಣನೆ ಆರಂಭ