Home ನಮ್ಮ ಜಿಲ್ಲೆ ಕೊಪ್ಪಳ ಮೇಲ್ಚಾವಣೆಯ ತಗಡನ್ನು ಕಟ್ಟು ಮಾಡಿ ಸರಣಿ ಕಳ್ಳತನ

ಮೇಲ್ಚಾವಣೆಯ ತಗಡನ್ನು ಕಟ್ಟು ಮಾಡಿ ಸರಣಿ ಕಳ್ಳತನ

0

ಕುಷ್ಟಗಿ: ಪಟ್ಟಣದಲ್ಲಿ ಬುಧವಾರ ತಡರಾತ್ರಿ ಬಸವೇಶ್ವರ ಸರ್ಕಲ್‌ನಲ್ಲಿರುವ ನಾಲ್ಕು ಅಂಗಡಿಗಳ ಮೇಲ್ಚಾವಣೆಯ ತಗಡನ್ನು ಕಟ್ಟು ಮಾಡಿ ಕಳ್ಳರು ಕೈಚಳಕ ತೋರಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬಸವೇಶ್ವರ ಸರ್ಕಲ್‌ನಲ್ಲಿರುವಂತಹ ಮಾಲೀಕ ಮಲ್ಲಿಕಾರ್ಜುನ್ ಗೌಡ ಕೋಳೂರ್ ಅವರಿಗೆ ಸೇರಿದ ಚಂದಾಲಿಂಗೇಶ್ವರ ಗೊಬ್ಬರದ ಅಂಗಡಿಯಲ್ಲಿ ೫ಸಾವಿರ ಹಾಗೂ ಒಂದು ರೂಪಾಯಿ ಎರಡು, ರೂಪಾಯಿ ನಾಣ್ಯ ಹಣವನ್ನು ಕಳ್ಳತನ ಮಾಡಿದ್ದಾರೆ.ಅದೇ ರೀತಿ ಕಳೆದ ವರ್ಷ 1,5 ಲಕ್ಷ ರೂಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್ ಗೌಡ ಕೋಳೂರು ತಿಳಿಸಿದರು.
ಸಿಗರೇಟ್,ಗುಟ್ಕಾ, ಸಿಹಿ ಪದಾರ್ಥ ಕಳುವು: ಮಮ್ಮದ್ ಮುಸ್ತಾಫ್ ಅವರಿಗೆ ಸೇರಿದ ಅಹಮದ್ ಸ್ವೀಟ್ ಅಂಗಡಿಯ ಮೇಲ್ಚಾವಣಿಯ ತಗಡು ಮುರಿದು ಅಂಗಡಿಯ ಒಳಗಳಿಗೆ ಬಂದು ರೂ.೨೦ ಸಾವಿರಗಳಷ್ಟು ಗುಟುಕಾ, ಸಿಗರೇಟ್, ಸಿಹಿ ಪದಾರ್ಥಗಳನ್ನು ಕಳ್ಳರು ಚಳಕ ತೋರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಮಮ್ಮದ್ ಮುಸ್ತಾಫ್ ಮಾಹಿತಿ ನೀಡಿದರು.
ಹಾರ್ಡ್ವೇರ್ ಅಂಗಡಿ ಕಳವು: ಸಿದ್ದಲಿಂಗೇಶ್ವರ ಅಂಗಡಿಯ ಮಾಲೀಕ ಸಿದ್ದರಾಮಯ್ಯ ಹಿರೇಮಠ ಅವರಿಗೆ ಸೇರಿದ ಸಿದ್ದರಾಮೇಶ್ವರ ಹಾರ್ಡ್ವೇರ್ ನಲ್ಲಿ ಹಗ್ಗ ಸೇರಿದಂತೆ ಇನ್ನಿತರ ಸಾಮಗ್ರಿಗಳು ಹೋಗಿದ್ದು ಅಂದಾಜು 15 ಲಕ್ಷ 15000 ಎಷ್ಟು ಕಳ್ಳತನವಾಗಿದೆ ಎಂದು ಸಿದ್ದರಾಮೇಶ್ವರ ಹಿರೇಮಠ ತಿಳಿಸಿದರು.
ಎಲೆಕ್ಟ್ರಿಕಲ್ ಅಂಗಡಿಗಳು ಕಳುವು ಮಾಡಲು ವಿಫಲ:ಸಿ ದ್ದಲಿಂಗಯ್ಯ ಹಿರೇಮಠ ಅವರಿಗೆ ಸೇರಿದ ಹಳೆಕೋಟೆ ವೀರಭದ್ರೇಶ್ವರ ಎಲೆಕ್ಟ್ರಾನಿಕ್ ಅಂಗಡಿಯ ಮೇಲ್ಚಾವಣಿಯ ತಗಡನ್ನು ಕಟ್ಟು ಮಾಡಲು ಕಳ್ಳರು ಮುಂದಾಗಿದ್ದಾರೆ. ಆದರೆ, ಅಂಗಡಿಯವಳಗಡೆಗೆ ಪ್ಲೈವುಡ್ ಅಳವಡಿಸಿರುವುದರಿಂದ ತಗಡನ್ನು ಕಟ್ಟು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಅಂಗಡಿಯನ್ನು ಬಿಟ್ಟು ಮುಂದಿನ ಮೂರು ಅಂಗಡಿಗಳನ್ನು ಕಳ್ಳತನ ಮಾಡಿದ್ದಾರೆ ಸಿದ್ದಲಿಂಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಕಳ್ಳತನವಾದ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ ರಾಠೋಡ್ ಭೇಟಿ ಪರಿಶೀಲಿಸಿದ್ದಾರೆ.

Exit mobile version