Home ಅಪರಾಧ ಮನೆಯವರನ್ನು ಕಟ್ಟಿ ಹಾಕಿ ದರೋಡೆ: ಕೋಟ್ಯಂತರ ಮೌಲ್ಯದ ಆಭರಣ, 25ಲಕ್ಷ ನಗದು ಕಳ್ಳತನ

ಮನೆಯವರನ್ನು ಕಟ್ಟಿ ಹಾಕಿ ದರೋಡೆ: ಕೋಟ್ಯಂತರ ಮೌಲ್ಯದ ಆಭರಣ, 25ಲಕ್ಷ ನಗದು ಕಳ್ಳತನ

0

ಹುಬ್ಬಳ್ಳಿ: ಮನೆಯಲ್ಲಿ ಇದ್ದವರನ್ನು ಕಟ್ಟಿಹಾಕಿ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 25ಲಕ್ಷಕ್ಕೂ ಹೆಚ್ಚು ನಗದು ಕದ್ದ ಖದೀಮರು ಮನೆ ಮಾಲೀಕರ ಕಾರನ್ನೇ ಬಳಸಿಕೊಂಡು ಪರಾರಿಯಾದ ಘಟನೆ ಗೋಕುಲ ರಸ್ತೆಯ ಬಸವೇಶ್ವರ ನಗರದಲ್ಲಿ ನಡೆದಿದೆ. ಗೋಕುಲ ರಸ್ತೆಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಿವಾಸಿ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯ ಕಿಟಕಿಯ ಗ್ರೀಲ್ ಕೊರೆದು ಮನೆಯಲ್ಲಿದ್ದ 6 ಜನರನ್ನ ಕಟ್ಟಿ ಹಾಕಿ ಕೃತ್ಯ ಎಸಗಿದ್ದಾರೆ.
ಸುಮಾರು ಎಂಟು ಜನ ಡಕಾಯಿತರಿಂದ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಅಲ್ಲದೆ, ಖದೀಮರ ಜಾಡು ಹಿಡಿದು ಬೆಳಗಾವಿ ತಲುಪಿರುವ ಗೋಕುಲ ರಸ್ತೆ ಠಾಣೆಯ ಪೊಲೀಸರು, ಸಿಸಿ ಟಿವಿ ದೃಶ್ಯಗಳ ಆಧಾದ ಮೇಲೆ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Exit mobile version