Home ನಮ್ಮ ಜಿಲ್ಲೆ ಕೊಪ್ಪಳ ತಲೆ ಸುತ್ತಿ ಬಿದ್ದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಗವಿಶ್ರೀ

ತಲೆ ಸುತ್ತಿ ಬಿದ್ದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಗವಿಶ್ರೀ

0

ಕೊಪ್ಪಳ: ತಲೆ ಸುತ್ತಿ ಬಿದ್ದು ಗಾಯಗೊಂಡ ವ್ಯಕ್ತಿಯ ಸಹಾಯಕ್ಕೆ ಧಾವಿಸುವ ಮೂಲಕ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾನವೀಯತೆ ಮರೆದಿದ್ದಾರೆ.

ನಗರದ ಗವಿಮಠಕ್ಕೆ ಗುರುವಾರ ಆಗಮಿಸಿದ್ದ ಬಹದ್ದೂರ್ ಬಂಡಿ ಗ್ರಾಮದ ನಿವಾಸಿ ರಾಘವೇಂದ್ರ ಎನ್ನುವವರು ಗವಿಮಠದ ಆವರಣದಲ್ಲಿಯೇ ತಲೆ ಸುತ್ತಿ ದಿಢೀರ್ ಕುಸಿದು ಬಿದ್ದರು. ಬಳಿಕ ಸ್ಥಳದಲ್ಲಿಯೇ ಇದ್ದ ಗವಿಶ್ರೀಗಳು ತಕ್ಷಣ ರಾಘವೇಂದ್ರನ ಸಹಾಯಕ್ಕೆ ಧಾವಿಸಿ, ಬೈಕ್ ಮೇಲತ್ತಿಸಿದರು.

ಗಾಯಗೊಂಡಿದ್ದ ರಾಘವೇಂದ್ರನನ್ನು ನಗರದ ಗವಿಸಿದ್ದೇಶ್ವರ ಆರ್ಯುವೇದಿಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ತಲೆ ಮತ್ತು ಕಾಲಿಗೆ ಪೆಟ್ಟಾಗಿದೆ.

Exit mobile version