ಟ್ವಿಟರ್‌ ಹಕ್ಕಿ ಬದಲು “X” ಬಂತು

0
16

ಟ್ವಿಟರ್‌ನಲ್ಲಿ ಇಂದು ಹಕ್ಕಿ ಹಾರಿ ಹೋಗಿದೆ. ಹಕ್ಕಿ ಜಾಗೆಯಲ್ಲಿ “X” ಬಂದಿದೆ.
ಹೌದು, ಎಲಾನ್ ಮಸ್ಕ್ ಟ್ವಿಟರ್ ನೇತೃತ್ವ ವಹಿಸಿಕೊಂಡಾಗಿನಿಂದ ಹಲವು ಬದಲಾವಣೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗ ಲೋಗೋವನ್ನು ಅಧಿಕೃತವಾಗಿ ಬದಲಾವಣೆ ಮಾಡಿದ್ದಾರೆ.
ಟ್ವಿಟರ್‌ನ ಸಿಇಒ ಲಿಂಡಾ ಯಾಸಿನೊ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು “X” ಎಂದು ಕರೆಯಲಾಗುವುದು ಎಂದು ಈಗಾಗಲೇ ದೃಢಪಡಿಸಿದ್ದಾರೆ.
ಹೊಸ ಲೋಗೋವನ್ನು X ಎಂದು ಮರುನಾಮಕರಣ ಮಾಡಲಾಗಿದೆ. ಎಕ್ಸ್‌ ಡಾಟ್‌ ಕಾಮ್‌ ಈಗ ಟ್ವಿಟರ್‌ ಡಾಟ್‌ ಕಾಮ್‌ ಅನ್ನು ಸೂಚಿಸುತ್ತದೆ. ಎಕ್ಸ್‌ ಲೋಗೋ ಇಂದು ಲೈವ್‌ ಆಗಲಿದೆ ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಟ್ವಿಟ್ಟರ್‌ನಲ್ಲಿ ತಮ್ಮ ಪ್ರೊಫೈಲ್‌ ಚಿತ್ರವನ್ನು ಬದಲಾಯಿಸಿಕೊಂಡಿದ್ದಾರೆ.

Previous articleಮಳೆಗೆ ಮಾಯವಾದ ಬಾವಿ
Next articleಆಪರೇಷನ್‌ ಮಾಡಿದ್ರೆ, ಡಿಕೆಶಿ ಜೊತೆಯೇ ಮಾಡಬೇಕಲ್ವಾ