ಶ್ರೀಮುರಳಿ ಹೊಸ ಸಿನಿಮಾ ಪರಾಕ್

0
61

‘ಬಂಡಿ ಮಹಾಕಾಳಿ ಸನ್ನಿಧಿಯಲ್ಲಿ ಶ್ರೀಮುರಳಿ ಹೊಸ ಚಿತ್ರದ ಮುಹೂರ್ತ

ಬಘೀರ ಸಿನಿಮಾದ ಸಕ್ಸಸ್ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಪರಾಕ್ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ಇಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಪರಾಕ್ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಬಳಿಕ ಸುದ್ದಿಗಾರರೊಂದಿಗೆ ಶ್ರೀಮುರಳಿ ಮಾತನಾಡಿ, “ಪರಾಕ್ ವಿಂಟೇಜ್ ಸ್ಟೈಲ್‌ನಲ್ಲಿ ನಡೆಯುವ ಸಿನಿಮಾ. ಮುಂದಿನ ಚಿತ್ರ ಯಾವ ರೀತಿ ಕಥೆ ಆಯ್ಕೆ ಮಾಡಬೇಕು ಎಂಬ ಟೆನ್ಷನ್ ಇತ್ತು. ಸುಮಾರು 200 ಕಥೆ ಕೇಳಿದ್ದೆ. ಪರಾಕ್ ಸಿನಿಮಾ ತಂಡದ ಜೊತೆ ಎರಡು ವರ್ಷ ಈಗಾಗಲೇ ಟ್ರಾವೆಲ್ ಮಾಡಿದ್ದೆ. ಈ‌ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.

ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರವಾಗಿದೆ. ಈ ಮೊದಲು ಕೆಲವು ಕಿರು ಚಿತ್ರ ಮಾಡಿರೋ ಅನುಭವ ಇದೆ. ಇದೀಗ ಪರಾಕ್ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ.

ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಕ್ಯಾಮೆರಾ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್‌ನ್ನು ಚಿತ್ರತಂಡ ರಿವೀಲ್ ಮಾಡಲಿದೆ.

Previous articleಕಾಲ್ತುಳಿತ ದುರಂತ: NDA 8 ಸದಸ್ಯರ ಸಂಸದೀಯ ನಿಯೋಗ ರಚನೆ
Next articleಗಡಿಪಾರು: ಮಧ್ಯಂತರ ತಡೆ ಕೋರಿ ಹೈಕೊರ್ಟ್‌ಗೆ ತಿಮರೋಡಿ

LEAVE A REPLY

Please enter your comment!
Please enter your name here