ಲಂಡನ್ ಕೆಫೆಯಲ್ಲಿ ʼಮೇಘʼ ಶಖೆ

0
47

ಮಂಗಳೂರು: ಬಹುನಿರೀಕ್ಷಿತ ಕನ್ನಡ ಮಾಸ್ ಆಕ್ಷನ್ ಚಿತ್ರ ‘ಆಪರೇಷನ್ ಲಂಡನ್ ಕೆಫೆ’ ಇದೇ ನವೆಂಬರ್ 28ರಂದು ಏಕಕಾಲಕ್ಕೆ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ಗಳು, ಟೀಸರ್, ಟ್ರೇಲರ್ ಮತ್ತು ‘ರೈ ರೈ ರೈ’ ಹಾಡು ಚಿತ್ರಪ್ರೇಮಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, “ತುಳುನಾಡಿನ ಪ್ರೀತಿ, ಬೆಂಬಲದಿಂದ ನಾನು ಬೆಳೆದಿದ್ದೇನೆ. ಮರಾಠಿ ಕಲಿಯದೇ ಇದ್ದರೂ ಪಾತ್ರಕ್ಕೆ ನ್ಯಾಯ ಕೊಡಲು ತಂಡ ದೊಡ್ಡ ಸಹಕಾರ ನೀಡಿದೆ. ಸಿನಿಮಾ ಸಂಪೂರ್ಣವಾಗಿ ಮನರಂಜನೆ ಮತ್ತು ಆ್ಯಕ್ಷನ್ ಪ್ಯಾಕೇಜ್,” ಎಂದು ಹೇಳಿದರು.

ಚಿತ್ರದ ಇನ್ನೊಬ್ಬ ಪ್ರಮುಖ ನಟ ಕವೀಶ್ ಶೆಟ್ಟಿ ಮಾತನಾಡಿ, “ಚಿತ್ರದ ಪ್ರಚಾರ ಕಾರ್ಯ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ಒಂದೇ ವೇಳೆ ಚಿತ್ರೀಕರಣ ಮಾಡಿರುವುದು ಚಿತ್ರಕ್ಕೆ ವಿಶೇಷತೆ,” ಎಂದು ತಿಳಿಸಿದ್ದಾರೆ.

ಈ ಭರ್ಜರಿ ಸಿನಿಮಾವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ Indian Film Factory ಮತ್ತು Deepak Rane Films ಬ್ಯಾನರ್‌ನಡಿ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ನಟಿ ಮೇಘಾ ಶೆಟ್ಟಿ ಗ್ರಾಮೀಣ ಕನ್ನಡ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಬಿಡುಗಡೆಯಾದ ಹಾಡು ಮತ್ತು ಟ್ರೇಲರ್‌ನಲ್ಲಿ ಅವರ ಲುಕ್ ಹಾಗೂ ಅಭಿನಯ ಗಮನಸೆಳೆದಿದೆ. ತರೆಮೂಲದ ನಟಿ ಶಿವಾನಿ ಸುರ್ವೆ ಮತ್ತು ಮರಾಠಿ ನಟ ವಿರಾಟ್ ಮಡ್ಕ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಜನಪ್ರಿಯ ಕಲಾವಿದರು ಬಿ. ಸುರೇಶ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವಥ್, ಧರ್ಮೇಂದ್ರ ಅರಸ್ ಸೇರಿದಂತೆ ಹಲವು ಹೆಸರುಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮುಂಬೈ ಮೂಲದ ಪಾಂಶು ಝಾ ಸಂಗೀತವಿದೆ. ಛಾಯಾಗ್ರಹಣ ಆರ್.ಡಿ. ನಾಗಾರ್ಜುನ್, ಸಾಹಸ ಸಂಯೋಜನೆ ವಿಕ್ರಂ ಮೊರ್, ಮಾಸ್ ಮಾದ್ ಮತ್ತು ಅರ್ಜುನ್ ರಾಜ್ ಮಾಡಿದ್ದಾರೆ.

ಚಿತ್ರದ ಹಾಡುಗಳಿಗೆ ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಬರೆದಿದ್ದು, ಗಾಯಕರಾಗಿ ಅನಿರುದ್ಧ ಶಾಸ್ತ್ರಿ, ಐಶ್ವರ್ಯ ರಂಗರಾಜನ್, ಬ್ರಿಜೇಶ್ ಶಾಂಡಿಲ್ಯ, ಪ್ರಥ್ವಿ ಭಟ್ ಮತ್ತು ಶ್ರೀಲಕ್ಷ್ಮಿ ಬೆಳ್ಳಣ್ಣು ಚಮತ್ಕಾರ ಮಾಡಿದ್ದಾರೆ.

ಈಗಾಗಲೇ ಬಿಡುಗಡೆಯಾದ ಟ್ರೇಲರ್ ಮತ್ತು ಹಾಡುಗಳು ಟ್ರೆಂಡಿಂಗ್ ಆಗಿದ್ದು, ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Previous articleಗ್ರಾಮ್ಯ ಸೊಗಡಿನ ಅರೆಭಾಷೆ ಸಾಮಾಜಿಕ ನಾಟಕ ‘ಅಪ್ಪ’..!
Next articleಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದ ಮನೆ ಕಳ್ಳತನ ಪ್ರಕರಣ ಭೇದಿಸಿದ  ತಳುಕು ಪೊಲೀಸರು: ಓರ್ವ ಆರೋಪಿ ಬಂಧನ, ಚಿನ್ನಾಭರಣ ವಶ!

LEAVE A REPLY

Please enter your comment!
Please enter your name here