Home ಸಿನಿ ಮಿಲ್ಸ್ ಮಕ್ಕಳ ಪಾಲಿನ “ಧ್ರುವ” ನಕ್ಷತ್ರ

ಮಕ್ಕಳ ಪಾಲಿನ “ಧ್ರುವ” ನಕ್ಷತ್ರ

0

ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂದ 2 ಲಕ್ಷ ಪುಸ್ತಕಗಳು ಸರ್ಕಾರಿ ಶಾಲೆಗಳಿಗೆ

ಬೆಂಗಳೂರು: ಪ್ರಸಿದ್ಧ ನಟ ಧ್ರುವ ಸರ್ಜಾ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಸಂದರ್ಭ, ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡ ವಿಶೇಷ ಯೋಜನೆಯ ಕುರಿತು ಸುದ್ದಿಯಾಗುತ್ತಿದೆ. ತಮ್ಮ ಹುಟ್ಟುಹಬ್ಬದ ಆಚರಣೆಯ ಸಂದರ್ಭ, ಧ್ರುವ ಸರ್ಜಾ ಅವರಿಗೆ ಉಡುಗೊರೆಯಾಗಿ ಬಂದ 2 ಲಕ್ಷ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನಿಡುವುದಾಗಿ ತಿಳಿಸಿದ್ದಾರೆ.

“ಈ 2 ಲಕ್ಷ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಂಚುವುದು ನನ್ನ ಆಶಯ, ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಓದುವ ಅಭ್ಯಾಸವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾರಾ-ತುರಾಯಿ ಬದಲು ಪುಸ್ತಕ ಉಡುಗೊರೆ ನಿಡುವಂತೆ ಮನವಿ ಮಾಡಲಾಗಿತ್ತು. ಆದರೆ ಈ ಯೋಜನೆ ನಮ್ಮ ಬಳಗದ್ದು(ಟೀಮ್‌ನದು) ಇಷ್ಟೊಂದು ಪುಸ್ತಕ ಬಂದಿರುವದು ಸಂತಸ, ನನ್ನ ಹೆಂಡತಿಯು ಟೀಚರ್ ಅವರು ಸಹ 25 ಪುಸ್ತಕ ಉಡುಗೊರೆ ನೀಡಿದ್ದಾರೆ‌, ನನ್ನ ತಾಯಿ ಸಹ ಪುಸ್ತಕ ನೀಡಿದ್ದಾರೆ. ಅಭಿಮಾನಿಗಳು ಸಹ ಪುಸ್ತಕ ಉಡುಗೊರೆಯಾಗಿ ನೀಡಿದ್ದು. ಉಡುಗೊರೆಯಾಗಿ ಬಂದ ಪುಸ್ತಕಗಳ ಸಂಖ್ಯೆ 2 ಲಕ್ಷ ದಾಟಿದೆ. ಇದರ ಕ್ರೇಡಿಟ್‌ ಟೀಮ್‌ಗೆ ಸಲ್ಲಬೇಕು ಎಂದರು.

ಈ ನಿರ್ಧಾರಕ್ಕೆ ಅಭಿಮಾನಿಗಳು ಮತ್ತು ಸಾಮಾಜಿಕ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧ್ರುವ ಸರ್ಜಾ ಸದ್ಯದ ಕನ್ನಡ ಚಿತ್ರರಂಗದ ಪ್ರಭಾವಶಾಲಿ ನಟರಾಗಿದ್ದು, ತಮ್ಮ ಸಾಮಾಜಿಕ ಹೊಣೆಗಾರಿಕೆ ಮೂಲಕ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತೇಜಿಸಲು ಮುಂದಾಗಿದ್ದಾರೆ.

ನಿಖರವಾಗಿ, ಈ ಯೋಜನೆಯ ಮೂಲಕ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಓದುವ ಸಾಮರ್ಥ್ಯವನ್ನು ವೃದ್ಧಿಸುವುದೇ ಮುಖ್ಯ ಉದ್ದೇಶ ಎಂದು ಅಭಿಮಾನಿಗಳು ಮತ್ತು ಶಾಲಾ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.

ಈ ನಡೆ ಧ್ರುವ ಸರ್ಜಾ ಅವರ ಸಾಮಾಜಿಕ ಹೊಣೆಗಾರಿಕೆ, ಶಿಕ್ಷಣಾಭಿವೃದ್ಧಿ ಪ್ರೀತಿ ಮತ್ತು ಬಾಲಕರ ಹಿತಚಿಂತನೆಯನ್ನು ತೋರಿಸುವ ಪ್ರಮುಖ ಉದಾಹರಣೆಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version