ಬೆಂಗಳೂರು: ಕನ್ನಡ ಚಿತ್ರರಂಗ ಶತಮಾನೋತ್ಸವದ ಸಂಭ್ರಮಕ್ಕೆ ಕಾಲಿಡುತ್ತಿರುವ ಈ ಸುಂದರ ಸಂದರ್ಭದಲ್ಲಿ, ಸ್ಯಾಂಡಲ್‌ವುಡ್ ಸಾಮರ್ಥ್ಯ ಏನೆಂಬುದು ಜಗತ್ತಿಗೆ ಈಗಾಗಲೇ ಸಾಬೀತಾಗಿದೆ. ಒಮ್ಮೆ ಕೇವಲ ಪ್ರಾದೇಶಿಕ ಮಾರುಕಟ್ಟೆಗೆ ಸೀಮಿತವಾಗಿದ್ದ ಕನ್ನಡ ಸಿನಿಮಾಗಳು, ಇಂದು ‘ಕೆಜಿಎಫ್’, ‘ಕಾಂತಾರ’ದಂತಹ ಚಿತ್ರಗಳ ಮೂಲಕ ಬಾಲಿವುಡ್ ಮತ್ತು ಹಾಲಿವುಡ್ ಮಂದಿ ಹುಬ್ಬೇರಿಸುವಂತಹ ಸಾಧನೆ ಮಾಡಿವೆ.
ಸಾವಿರ ಕೋಟಿ ಗಳಿಕೆ ಎಂಬುದು ಕನ್ನಡಿಗರಿಗೆ ಈಗ ಕನಸಾಗಿ ಉಳಿದಿಲ್ಲ, ಅದೊಂದು ರಿಯಾಲಿಟಿ. ಈ ಹಾದಿಯಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸ್ತುತ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದರೂ, ಅವರ ಮೇಲಿನ ಅಭಿಮಾನ ಮಾತ್ರ ರವೆಷ್ಟೂ ಕಡಿಮೆಯಾಗಿಲ್ಲ.
ಬದಲಾಗಿ, ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದರೆ ಅದು 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವನ್ನೇ ಶುರುಮಾಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಅನ್ನು ಮೀರಿಸಿ ಬೆಳೆಯುವ ತಾಕತ್ತು ಕನ್ನಡ ಚಿತ್ರರಂಗಕ್ಕಿದೆ. ದರ್ಶನ್ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ ಬಿಡುಗಡೆಯಾಗಲಿರುವ ಇತರೆ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಪ್ರಚಾರ ಮಾಡಿ, ಬಾಕ್ಸ್ ಆಫೀಸ್ ಸುಲ್ತಾನನ ಪಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಲು ‘ಸೆಲೆಬ್ರಿಟಿಗಳು’ (ಅಭಿಮಾನಿಗಳು) ಪಣ ತೊಟ್ಟಿದ್ದಾರೆ.
ಹಿಂದಿ ಚಿತ್ರರಂಗದ ಸ್ಟಾರ್‌ಗಳೇ ಕನ್ನಡದ ಕಂಟೆಂಟ್ ನೋಡಿ ಭಯಪಡುವಂತಹ ವಾತಾವರಣ ನಿರ್ಮಾಣವಾಗಿರುವಾಗ, ದರ್ಶನ್ ಮಾಸ್ ಫಾಲೋಯಿಂಗ್ ಈ ಮೈಲಿಗಲ್ಲನ್ನು ಮುಟ್ಟಬಲ್ಲದು ಎಂಬ ವಿಶ್ವಾಸ ಅಭಿಮಾನಿಗಳದ್ದು.
ಒಟ್ಟಿನಲ್ಲಿ ವಿವಾದಗಳ ನಡುವೆಯೂ ದರ್ಶನ್ ಕ್ರೇಜ್ ಕುಂದಿಲ್ಲ ಎಂಬುದಕ್ಕೆ ಈ ಅಭಿಯಾನವೇ ಸಾಕ್ಷಿ. ಈ ಗುರಿ ತಲುಪಿದರೆ ಸ್ಯಾಂಡಲ್‌ವುಡ್ ಕಿರೀಟಕ್ಕೆ ಮತ್ತೊಂದು ಗರಿ ಸೇರುವುದಂತೂ ಖಚಿತ.


























