Home ಸಿನಿ ಮಿಲ್ಸ್ Movie Review: ಕರ್ಣನ ಮತ್ತೊಂದು ಅವತಾರ ರಾಧೇಯ

Movie Review: ಕರ್ಣನ ಮತ್ತೊಂದು ಅವತಾರ ರಾಧೇಯ

0

ಚಿತ್ರ: ರಾಧೇಯ
ನಿರ್ದೇಶನ: ವೇದಗುರು
ನಿರ್ಮಾಣ: ವೇದಗುರು
ತಾರಾಗಣ: ಕೃಷ್ಣ ಅಜೇಯ್ ರಾವ್, ಸೋನಾಲ್ ಮಂತೇರೋ, ಧನ್ಯಾ ಬಾಲಕೃಷ್ಣ ಹಾಗೂ ಗಿರೀಶ್ ಶಿವಣ್ಣ ಮತ್ತಿತರರು.
ರೇಟಿಂಗ್ಸ್: ***

ಜಿ.ಆರ್.ಬಿ

ಮಹಾಭಾರತದ ಕರ್ಣನ ಇನ್ನೊಂದು ಹೆಸರು ರಾಧೇಯ. ಕರ್ಣನ ಸಾಕು ತಾಯಿ ರಾಧಾ. ಹೀಗಾಗಿ ಕರ್ಣನಿಗೆ ರಾಧೇಯ ಎಂದೂ ಕರೆಯುತ್ತಾರೆ. ಕರ್ಣನಲ್ಲಿದ್ದ ತ್ಯಾಗದ ಗುಣ ನಾಯಕನಿಗಿರುವುದರಿಂದ ಚಿತ್ರಕ್ಕೆ ಆ ಹೆಸರನ್ನಿಡಲಾಗಿದೆ… ಹೀಗೆಂದು ನಿರ್ದೇಶಕ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಸಿನಿಮಾದ ಕಥೆ ಏನು..?

ಮೇಲಿನ ಸಾಲುಗಳನ್ನೇ ಸಿನಿಮಾದ ಮೂಲ ಕಥನವಾಗಿಸಿ, ಉಳಿದ ಎಳೆಗಳಿಗೆ ಕೊಂಚ ಕಮರ್ಷಿಯಲ್ ಟಚ್ ಕೊಟ್ಟು `ರಾಧೇಯ’ ಎಂಬ ಪಾಕ ತೆಗೆದಿದ್ದಾರೆ ನಿರ್ದೇಶಕ ವೇದಗುರು. ಆರಂಭದಿಂದಲೂ ಸಿನಿಮಾವನ್ನು ಕುತೂಹಲಗಳ ಸರಪಳಿಯನ್ನಾಗಿಸಬೇಕು ಎಂದು ಪಣ ತೊಟ್ಟು ಗಟ್ಟಿ ಕಥೆ ಅದರಷ್ಟೇ ಬಲವಾದ ಚಿತ್ರಕಥೆ ಮಾಡಿಕೊಂಡು ಕಣಕ್ಕಿಳಿದಂತಿದೆ…

ಹೀಗಾಗಿ ಪ್ರತಿ ಫ್ರೇಮ್, ದೃಶ್ಯಗಳಲ್ಲೂ ಲೈಟಿಂಗ್‌ನಿಂದ ಹಿಡಿದು ಕಲಾವಿದರು ಒಪ್ಪಿಸುವ ಸಂಭಾಷಣೆವರೆಗೂ ಪಕ್ವತೆ ಎದ್ದು ಕಾಣುತ್ತದೆ. ಇಲ್ಲೆಲ್ಲೋ ನಿಧಾನವಾಯಿತಲ್ಲ… ಎಂದುಕೊಳ್ಳುವಷ್ಟರಲ್ಲೇ ಮತ್ತೊಂದು ಟ್ವಿಸ್ಟ್ ಎದುರಾಗುತ್ತದೆ. ಇದು ಉಸಿರುಗಟ್ಟಿಸುವ ಥ್ರಿಲ್ಲರ್ ಅಲ್ಲ… ಇಲ್ಲೊಂದು ನವಿರಾದ ಪ್ರೇಮವಿದೆ. ಅದಕ್ಕೆ ರಕ್ತ ಮೆತ್ತಿಕೊಂಡಿದೆ..! ಅದಕ್ಕೆ ಕಾರಣವೇನು ಎಂಬುದಕ್ಕೆ ಸಿನಿಮಾದಲ್ಲಿ ಉತ್ತರವಿದೆ.

ಕೃಷ್ಣ ಅಜೇಯ್ ರಾವ್ ಇಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮಂತೇರೋ ಹಾಗೂ ಧನ್ಯಾ ಬಾಲಕೃಷ್ಣ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವಿಯಾನ್ ಸಂಗೀತ, ರಮ್ಮಿ ಕ್ಯಾಮೆರಾ ಕುಸುರಿ ಚಿತ್ರದ ಪ್ಲಸ್ ಪಾಯಿಂಟ್.

NO COMMENTS

LEAVE A REPLY

Please enter your comment!
Please enter your name here

Exit mobile version