Upendra: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಆಂಧ್ರ ಕಿಂಗ್ ತಾಲ್ಲೂಕ’ (AKT) ಪ್ರಚಾರ ಕಾರ್ಯಕ್ರಮವು ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ರಿಯಲ್ ಸ್ಟಾರ್ ಉಪೇಂದ್ರ ಮತ್ತು ತೆಲುಗಿನ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಂಭ್ರಮ ಹೆಚ್ಚಿಸಿದರು. ಈ ವೇಳೆ ಮಾತನಾಡಿದ ಉಪೇಂದ್ರ, ಅಭಿಮಾನಿಗಳನ್ನುದ್ದೇಶಿಸಿ ಆಡಿದ ಮಾತುಗಳು ಈಗ ಎಲ್ಲೆಡೆ ವೈರಲ್ ಆಗಿವೆ.
ನೀವೇ ಈ ಚಿತ್ರದ ರಿಯಲ್ ಹೀರೋಗಳು!: ವೇದಿಕೆಯಲ್ಲಿ ಮೈಕ್ ಹಿಡಿದು ಮಾತನಾಡಿದ ಉಪ್ಪಿ, “ಈ ಸಿನಿಮಾದಲ್ಲಿ ರಾಮ್ ಅಥವಾ ನಾನು ನಾಯಕರಲ್ಲ. ಈ ಚಿತ್ರಕ್ಕೆ ನಿಜವಾದ ಹೀರೋಗಳು ನೀವೇ (ಅಭಿಮಾನಿಗಳು). ಇದು ನಿಮಗಾಗಿ, ನಿಮ್ಮ ಪ್ರೀತಿಗಾಗಿ ಮಾಡಿರುವ ಸಿನಿಮಾ,” ಎಂದು ಹೇಳುವ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳ ಮನ ಗೆದ್ದರು.
ವಿಶೇಷವೆಂದರೆ, ಈ ಚಿತ್ರದಲ್ಲಿ ಉಪೇಂದ್ರ ಅವರು ‘ಸೂಪರ್ ಸ್ಟಾರ್’ ಪಾತ್ರದಲ್ಲಿ ಮಿಂಚಿದ್ದರೆ, ನಾಯಕ ರಾಮ್ ಪೋತಿನೇನಿ ಆ ಸೂಪರ್ ಸ್ಟಾರ್‌ಗೆ ಪ್ರಾಣ ಕೊಡುವ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಸಿನಿಮಾ ಅಲ್ಲ, ಒಬ್ಬ ತಾರೆ ಮತ್ತು ಆತನ ಅಭಿಮಾನಿಯ ನಡುವಿನ ಭಾವನಾತ್ಮಕ ಸಂಬಂಧದ ಕಥೆಯಾಗಿದೆ.
ಪಕ್ಕಾ ಪೈಸಾ ವಸೂಲ್ ಮನರಂಜನೆ:
:ರದ ಗದ್ದುಗೆ ಏರಿದ ನಿತೀಶ್ ಕುಮಾರ್!ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಉಪೇಂದ್ರ, “ಇದು ಹಾಡು, ಕುಣಿತ, ಫೈಟ್ ಮತ್ತು ಪ್ರೀತಿ ಎಲ್ಲವನ್ನೂ ಒಳಗೊಂಡಿರುವ ಪಕ್ಕಾ ಕಮರ್ಶಿಯಲ್ ಪ್ಯಾಕೇಜ್. ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರಬರುವಾಗ ಪ್ರತಿಯೊಬ್ಬ ಅಭಿಮಾನಿಯೂ ಕಾಲರ್ ಎತ್ತಿಕೊಂಡು ಬರುವುದು ಗ್ಯಾರಂಟಿ,” ಎಂದು ಭರವಸೆ ನೀಡಿದರು.
ಇದೇ ವೇಳೆ ನಾಯಕಿ ಭಾಗ್ಯಶ್ರೀ ಬೋರ್ಸೆ ಮತ್ತು ರಾಮ್ ಅವರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ ಎಂದು ಸಹನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಉಪೇಂದ್ರ ಅವರು ತೆಲುಗು ಚಿತ್ರರಂಗದಲ್ಲಿ ಈಗಾಗಲೇ ತಮದೇ ಆದ ಛಾಪು ಮೂಡಿಸಿದ್ದಾರೆ. ‘ಸನ್ ಆಫ್ ಸತ್ಯಮೂರ್ತಿ’, ‘ಗನಿ’ ಮುಂತಾದ ಚಿತ್ರಗಳ ನಂತರ ಈಗ ಪೂರ್ಣ ಪ್ರಮಾಣದ ಪ್ರಮುಖ ಪಾತ್ರದಲ್ಲಿ ‘ಎಕೆಟಿ’ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅದ್ದೂರಿಯಾಗಿ ನಿರ್ಮಿಸಿರುವ ಮತ್ತು ಮಹೇಶ್ ಬಾಬು ಪಚ್ಚಿಗೊಲ್ಲ ನಿರ್ದೇಶಿಸಿರುವ ಈ ಚಿತ್ರವು ಇದೇ ನವೆಂಬರ್ 27 ರಂದು ತೆರೆಕಾಣಲಿದೆ. ಬೆಂಗಳೂರಿನಲ್ಲಿ ತಮ್ಮ ಫೇವರಿಟ್ ಡೈಲಾಗ್ ಹೊಡೆದು ಕನ್ನಡಿಗರನ್ನೂ ರಂಜಿಸಿದ ಉಪ್ಪಿ, ರಾಮ್ ಪೋತಿನೇನಿಗೆ ಕನ್ನಡದ ಪ್ರೇಕ್ಷಕರ ಬೆಂಬಲ ಸದಾ ಇರುತ್ತದೆ ಎಂದು ಹಾರೈಸಿದರು.
