ಕಾಂಗ್ರೆಸ್‌ ದೇವಸ್ಥಾನ ಇರುವುದೇ ದೆಹಲಿಯಲ್ಲಿ, ಹೈಕಮಾಂಡೇ ದೇವರು

0
10

ಶಿವಮೊಗ್ಗ: ಕಾಂಗ್ರೆಸ್‌ನ ದೇವಸ್ಥಾನ ಇರುವುದೇ ದೆಹಲಿಯಲ್ಲಿ. ನಮಗೆ ಹೈಕಮಾಂಡ್ ದೇವರು. ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ಉತ್ತರಿಸಬೇಕು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ವಿಚಾರಕ್ಕೆ ಗೊಂದಲ ಯಾಕೆ ಬಂದಿದೆ ಗೊತ್ತಿಲ್ಲ. ಒಬ್ಬ ಸದಸ್ಯರನ್ನು ಆಯ್ಕೆ ಮಾಡುವ ಅವಧಿ 5 ವರ್ಷ ಇರುತ್ತದೆ. ಹಾಗಾಗಿ ಸಿಎಂ ಆಯ್ಕೆನೂ ಐದು ವರ್ಷವಿದೆ. ಹೈಕಮಾಂಡ್ ಬಲಿಷ್ಠವಾಗಿದ್ದು, ಅದರ ನಿರ್ದೇಶನದಂತೆ ಎಲ್ಲವೂ ನಡೆಯುತ್ತದೆ. ಗೊಂದಲವನ್ನು ಶೀಘ್ರದಲ್ಲಿಯೇ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಯಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡುವ ಪ್ರಶ್ನೆಯಿಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಧಾರ್ಮಿಕ ಕ್ಷೇತ್ರಕ್ಕೆ, ಎಲ್ಲಾ ಧರ್ಮೀಯರಿಗೆ ಅವರು ಬದುಕುವಂತಹ, ಪ್ರಾರ್ಥನೆ ಮಾಡುವಂತಹ ಪೂಜಿಸುವಂತಹ ಹಕ್ಕನ್ನು ಸಂವಿಧಾನದಲ್ಲಿ ಕೊಟ್ಟಿದ್ದಾರೆ. ಎಲ್ಲರಿಗೂ ಅವರದೇ ಆದಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆ ಸ್ವಾತಂತ್ರ್ಯಕ್ಕೆ ಯಾರಿಗೂ ಧಕ್ಕೆಯಾಗಬಾರದು ಎಂದು ಹೇಳಿದರು.

Previous articleಪರ್ತಗಾಳಿ ಮಠದ ಸುತ್ತ ಆಕರ್ಷಣೀಯ ಕಾವಿ ಕಲೆ
Next articleಹೆಸರಿಗಷ್ಟೇ ಖರ್ಗೆ ಎಐಸಿಸಿ ಅಧ್ಯಕ್ಷ: ಕಾರಜೋಳ

LEAVE A REPLY

Please enter your comment!
Please enter your name here