Home ನಮ್ಮ ಜಿಲ್ಲೆ ರಾಮನಗರ ಚನ್ನಪಟ್ಟಣವನ್ನು ‘ಚಿನ್ನದ ಪಟ್ಟಣ’ವನ್ನಾಗಿಸಬೇಕು…

ಚನ್ನಪಟ್ಟಣವನ್ನು ‘ಚಿನ್ನದ ಪಟ್ಟಣ’ವನ್ನಾಗಿಸಬೇಕು…

0

ಕಾಂಗ್ರೆಸ್‌ ಪಕ್ಷದಿಂದಲೇ ರಾಜಕೀಯ ಆರಂಭಿಸಿದ ಸಿಪಿ ಯೋಗೇಶ್ವರ್ ಅವರು ಮರಳಿ ಗೂಡಿಗೆ ಆಗಮಿಸಿದ್ದು ಪಕ್ಷದ ಬಲ ಹೆಚ್ಚಿಸಿದೆ

ಬೆಂಗಳೂರು: ಚನ್ನಪಟ್ಟಣವನ್ನು ‘ಚಿನ್ನದ ಪಟ್ಟಣ’ವನ್ನಾಗಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯುವ ಮೂಲಕ ಸಿಪಿವೈ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ವೇಳೆ ಸಚಿವರಾದ ರಾಮಲಿಂಗರೆಡ್ಡಿ, ಚಲುವರಾಯಸ್ವಾಮಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಕಾಂಗ್ರೆಸ್‌ ಪಕ್ಷದಿಂದಲೇ ರಾಜಕೀಯ ಆರಂಭಿಸಿದ ಸಿಪಿ ಯೋಗೇಶ್ವರ್ ಅವರು ಮರಳಿ ಗೂಡಿಗೆ ಆಗಮಿಸಿದ್ದು ಪಕ್ಷದ ಬಲ ಹೆಚ್ಚಿಸಿದ್ದು, ಅವರಿಗೆ ಶುಭವಾಗಲಿ. ಸಮಗ್ರ ಅಭಿವೃದ್ಧಿ ಮೂಲಕ ಚನ್ನಪಟ್ಟಣವನ್ನು ‘ಚಿನ್ನದ ಪಟ್ಟಣ’ವನ್ನಾಗಿಸಬೇಕೆಂಬ ಉಪ ಮುಖ್ಯಮಂತ್ರಿಗಳ ಆಶಯವನ್ನು ಈಡೇರಿಸಲು ನಾವೆಲ್ಲರೂ ಕೈಜೋಡಿಸೋಣ ಎಂದಿದ್ದಾರೆ.

Exit mobile version